ಕಠ್ಮಂಡು : ನೇಪಾಳಿ ಕಾಂಗ್ರೆಸ್‌ನ ರಾಮಚಂದ್ರ ಪೌಡೆಲ್ ಅವರು ನೇಪಾಳದ ಮೂರನೇ ಅಧ್ಯಕ್ಷರಾಗಿ ಗುರುವಾರ ಆಯ್ಕೆಯಾದರು.
ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್ (ಮಾವೋವಾದಿ ಕೇಂದ್ರ) ಸೇರಿದಂತೆ ಎಂಟು ಪಕ್ಷಗಳ ಮೈತ್ರಿಕೂಟದ ಸಾಮಾನ್ಯ ಅಭ್ಯರ್ಥಿ ಪೌಡೆಲ್ ಅವರು ಸಂಸತ್ತಿನ 214 ಶಾಸಕರು ಮತ್ತು 352 ಪ್ರಾಂತೀಯ ಅಸೆಂಬ್ಲಿ ಸದಸ್ಯರ ಮತಗಳನ್ನು ಪಡೆದರು.
ರಾಷ್ಟ್ರಪತಿಯಾಗಿ ಆಯ್ಕೆಯಾದ ನನ್ನ ಸ್ನೇಹಿತ ರಾಮ್ ಚಂದ್ರ ಪೌಡೆಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಟ್ವೀಟ್ ಮಾಡಿದ್ದಾರೆ.
ಅಧ್ಯಕ್ಷರ ಆಯ್ಕೆಗೆ ಒಟ್ಟು ಮತದಾರರ ಸಂಖ್ಯೆ 882, ಇದರಲ್ಲಿ 332 ಸಂಸತ್ ಸದಸ್ಯರು ಮತ್ತು ಏಳು ಪ್ರಾಂತ್ಯಗಳ ಪ್ರಾಂತೀಯ ಅಸೆಂಬ್ಲಿಗಳ 550 ಸದಸ್ಯರು ಇದ್ದಾರೆ.
518 ಪ್ರಾಂತೀಯ ಅಸೆಂಬ್ಲಿ ಸದಸ್ಯರು ಮತ್ತು ಫೆಡರಲ್ ಸಂಸತ್ತಿನ 313 ಸದಸ್ಯರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗದ ವಕ್ತಾರ ಶಾಲಿಗ್ರಾಮ್ ತಿಳಿಸಿದ್ದಾರೆ. ನೇಪಾಳವು 2008 ರಲ್ಲಿ ಗಣರಾಜ್ಯವಾದ ನಂತರ ಇದು ಮೂರನೇ ಅಧ್ಯಕ್ಷೀಯ ಚುನಾವಣೆಯಾಗಿದೆ.