Advertisement

ಉದ್ಯಮಶೀಲತೆ ಬೆಳವಣಿಗೆಗೆ ಎನ್‌ಇಪಿ ಪೂರಕ

03:15 PM May 17, 2022 | Team Udayavani |

ಹರಿಹರ: ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಲಿದೆ ಎಂದು ಸಮಗ್ರ ಬೆಳವಣಿಗೆ ಮತ್ತು ಸಂಶೋಧನಾ ವೇದಿಕೆಯ ಸಂಚಾಲಕ ಚಾರುದತ್ತ ಪಾಣಿಗ್ರಾಹಿ ಹೇಳಿದರು.

Advertisement

ನಗರದ ಕಿರ್ಲೋಸ್ಕರ್‌ ಇನ್ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಮ್ಯಾನೇಜ್‌ಮೆಂಟ್‌ನಲ್ಲಿ (ಕಿಯಾಮ್ಸ್‌) ಸೋಮವಾರ ಪದವಿ ಮತ್ತು ಸ್ನಾತಕೋತ್ತರ ಪದವಿಯ ಪ್ರಾಧ್ಯಾಪಕರಿಗೆ ಆಯೋಜಿಸಿದ್ದ ಬೋಧನಾಭಿವೃದ್ಧಿ ಕಾರ್ಯಕ್ರಮದಲ್ಲಿ ಉದ್ಯಮಶೀಲ ಮನೋಭಾವದ ಬೆಳವಣಿಗೆ ಮತ್ತು ಉದ್ಯಮ ಶೀಲತೆಗೆ ಅಗತ್ಯವಾದ ಪರಿಸರ, ಸಾಮಾಜಿಕ, ಆಡಳಿತಾತ್ಮಕ ಚೌಕಟ್ಟು ಹಾಗೂ ನಿರ್ವಹಣೆ ಬದಲಾವಣೆ ವಿಷಯ ಕುರಿತು ಮಾತನಾಡಿದರು.

ನಮ್ಮ ಮುಂಚಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಉದ್ಯೋಗಶೀಲತೆ ಬೆಳೆಸಲು ವಿಫಲವಾಗಿತ್ತು. ಆದರೆ ಹೊಸ ಶಿಕ್ಷಣ ನೀತಿಯ ಪಠ್ಯಕ್ರಮ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸಲು, ಪ್ರೋತ್ಸಾಹಿಸಲು ಪೂರಕವಾಗಿದೆ. ಅದರಲ್ಲೂ ಉನ್ನತ ಶಿಕ್ಷಣದಲ್ಲಿರುವ ಬೋಧಕರು ವಿದ್ಯಾರ್ಥಿಗಳಲ್ಲಿ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಉದ್ಯಶೀಲತೆ ಬೆಳೆಸುವ ಕಾಳಜಿ ತೋರಬೇಕು ಎಂದರು.

ಖಾಸಗಿ ಅಥವಾ ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಪರಿಸರ ಮತ್ತು ಸಾಮಾಜಿಕ ಕಳಕಳಿಯಿರುವ ಆಡಳಿತ ವ್ಯವಸ್ಥೆ ಬರಬೇಕು. ಜಾಗತಿಕ ಮಟ್ಟದಲಿ ಈ ಬಗ್ಗೆ ಕೆಲಸಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಉದ್ಯಮ ನಡೆಯಲು ಅದರ ಪರಿಸರ, ಸಮಾಜ ಮತ್ತು ಆಡಳಿತಾತ್ಮಕ ಬದ್ಧತೆ ಪ್ರಮುಖ ಅಂಶವಾಗಲಿದೆ. ಈ ಬಗ್ಗೆ ಅರಿವು ಮೂಡಿಸಲು ಶಿಕ್ಷಣದಲ್ಲಿ ಸೂಕ್ತ ಪಠ್ಯಕ್ರಮ ಮತ್ತು ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅವಶ್ಯವಾಗಿದೆ ಎಂದರು.

ಈವರೆಗೆ ಮಾನವನ ಏಳಿಗೆಗಾಗಿ ಆದ ಪರಿಸರ ಹಾನಿಯಿಂದ, ಕೈಗಾರಿಕೀಕರಣದಿಂದ ಆದ ಸಾಮಾಜಿಕ ಅಸಮತೋಲನದಿಂದ ನಾವೆಲ್ಲರೂ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿದೆ. ಯಾವ ಅಭಿವೃದ್ಧಿಯಿಂದ ನಮ್ಮ ಪರಿಸರ, ನೆಮ್ಮದಿ ಹಾಳಾಗುವುದೋ, ಮಾಲಿನ್ಯ ಹೆಚ್ಚಾಗುವುದೋ, ಆರೋಗ್ಯ ಕ್ಷೀಣಿಸುವುದೋ ಅಂತಹ ಸಾಮಾಜಿಕ, ಆಡಳಿತ ವ್ಯವಸ್ಥೆಯನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿ ಸುಚೇತಾ ಹೋಟಾ ಮಾತನಾಡಿ, ಕೋವಿಡ್‌ ನಂತರ ಜಾಗತಿಕ ಮಟ್ಟದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಮಷಿನ್‌ ಲರ್ನಿಂಗ್‌, ಇಂಟರ್ನೆಟ್‌ ಆಫ್‌ ಥಿಂಗಸ್‌ ಇಂದಿನ ಅವಶ್ಯಕತೆಗಳಾಗಿದ್ದು, ಇವುಳಿಂದಾಗುವ ಬದಲಾವಣೆಯನ್ನು ನಿರ್ವಹಿಸುವ ಕೌಶಲ್ಯವನ್ನು ಬೋಧಕರು ಮತ್ತು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಸಂಪನ್ಮೂಲ ವ್ಯಕ್ತಿಗಳಾದ ಚಾರುದತ್ತ ಪಾಣಿಗ್ರಹಿ ಮತ್ತು ಸುಚೇತಾ ಹೋಟಾ ಇವರಿಗೆ ಕಿಯಾಮ್ಸ ನಿರ್ದೇಶಕ ಡಾ| ಬಿಪ್ಲಬ್‌ ಕುಮಾರ್‌ ಬಿಸ್ವಾಲ್‌, ಪ್ರಾಧ್ಯಪಕ ಡಾ| ವಿ.ಎಸ್‌.ಪೈ ಮತ್ತು ಡಾ| ಸುಧಾಂಶು ನಂದಾ ಸನ್ಮಾನಿಸಿದರು. ಭಾಗವಹಿಸಿದ್ದ ಉಪನ್ಯಾಸರಿಕರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಹಪ್ರಾಧ್ಯಾಪಕ ಮತ್ತು ಡೀನ್‌ ಡಾ|ನಾಗರಾಜ್‌ ವಿ. ಬೇವಿನ ಮರದ್‌, ಡಾ|ಆರ್ಥರ್‌ ಪರ್ನಾಂಡಿಸ್‌, ಡಾ| ಚೇತನ್‌ ವಿ. ಹಿರೇಮಠ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next