Advertisement

ಎನ್‌ಇಪಿ ಅನುಷ್ಠಾನ: ಎಚ್ಚರ ಅಗತ್ಯ

12:35 PM Oct 06, 2021 | Team Udayavani |

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ್ದರೂ, ಅನುಷ್ಠಾನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಅದರ ಸಂಪೂರ್ಣ ಫ‌ಲ ಪಡೆಯಲು ಸಾಧ್ಯವಿದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಎಡ್‌ಕ್ವಾರ್ಟ್‌ ಶಿಕ್ಷಣ ಸಂಬಂಧಿತ ಸಂಸ್ಥೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ- ಪಠ್ಯಕ್ರಮ ಮತ್ತು ಗುಣಮಟ್ಟ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ಕೊರೊನಾದಿಂದ ನಮ್ಮ ಜೀವನ ಶೈಲಿ ಬದಲಾಗಿರುವ ಜತೆಗೆ ಶಾಲಾ ಮಕ್ಕಳ ಕಲಿಕಾ ವಿಧಾನ, ಶಿಕ್ಷಕರ ಬೋಧನಾ ವಿಧಾನದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಶಾಲೆಯಲ್ಲಿ ಮಕ್ಕಳು ಇಲ್ಲದಾಗ ಅದು ಬರೀ ಕಟ್ಟಡವಾಗಿಯೇ ಉಳಿಯಲಿದೆ.

ಹೀಗಾಗಿ ಶಾಲೆಗೆ ಮಕ್ಕಳು ಬರಬೇಕು ಮತ್ತು ಭೌತಿಕ ಕಲಿಕೆಯೇ ಹೆಚ್ಚು ಪರಿಣಾಮಕಾರಿ ಎಂದರು. ಎನ್‌ಇಪಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ರೂಪಿಸಿದ್ದಾರೆ. ಅನುಷ್ಠಾನವೂ ಅಷ್ಟೇ ವ್ಯವಸ್ಥಿತ ರೀತಿಯಲ್ಲಿ ಆಗಬೇಕು. ಅನುಷ್ಠಾನ ದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರವೂ ಅತಿ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳ ಪಠ್ಯಕ್ರಮದಲ್ಲೂ ಕೆಲವೊಂದು ಬದಲಾವಣೆಯಾಗಲಿದೆ.

ಇದನ್ನೂ ಓದಿ:-  ಆಪರೇಷನ್ ಕಮಲʼದಂಥ ʼನೀಚʼ ರಾಜಕಾರಣವನ್ನು ಆರ್ ಎಸ್ಎಸ್ ಶಾಖೆಯಲ್ಲೇ ಕಲಿಸಲಾಯಿತಾ:ಎಚ್ ಡಿಕೆ

ತ್ರಿಭಾಷಾ ನೀತಿಯೂ ಅನುಷ್ಠಾನಕ್ಕೆ ಬರಲಿದೆ. ವಿದ್ಯಾರ್ಥಿಗಳಿಗೆ ವಿಷಯದ ಆಯ್ಕೆಯಲ್ಲೂ ಹಲವು ಆಪ್ಷನ್‌ಗಳು ಇರಲಿವೆ. ಇದೆಲ್ಲದಕ್ಕೂ ಶಿಕ್ಷಣ ಸಂಸ್ಥೆಗಳು ಸಜ್ಜಾಗಬೇಕು. ಇಲಾಖಾ ಹಂತದಲ್ಲೂ ಕೆಲವೊಂದು ಬದಲಾವಣೆ ಹಾಗೂ ವಿಲೀನವೂ ಆಗಲಿದೆ. ಅನುಷ್ಠಾನದಲ್ಲಿ ಲೋಪವಾಗದಂತೆ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಎಚ್ಚರವಹಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.

Advertisement

ಶಾಲಾ ಹಂತದಲ್ಲಿ ಸೆಮಿಸ್ಟರ್‌ ಪದ್ಧತಿ ತರವುದರಿಂದ ಅನಾನುಕೂಲತೆ ಹೆಚ್ಚಿದೆ. ಶಿಕ್ಷಣ ಹಕ್ಕು ಕಾಯ್ದೆಯಲ್ಲೂ ಕೆಲವೊಂದು ತಿದ್ದುಪಡಿ ಬರಬಹುದು. ಈಗ 1ರಿಂದ ಮಾಡಿ(ಅನುತ್ತೀರ್ಣಗೊಳಿಸುವ ವ್ಯವಸ್ಥೆ) ಇಲ್ಲ. ಮುಂದೆ 3, 5 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರಲಿದೆ. ಶಿಕ್ಷಕರ ತರಬೇತಿಗೂ ಆದ್ಯತೆ ಸಿಗಲಿದೆ. ವಿದ್ಯಾರ್ಥಿಗಳನ್ನು ಪೂರ್ವ ಪ್ರಾಥಮಿಕ ತರಗತಿಯಿಂದಲೇ ಶಾಲಾವ್ಯವಸ್ಥೆಯಲ್ಲಿ ಸಜ್ಜುಗೊಳಿಸಲು ಬೇಕಾದ ಎಲ್ಲ ವ್ಯವಸ್ಥೆ ನೀತಿಯಲ್ಲಿದೆ ಎಂದರು.

ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಮಾತನಾಡಿದರು. ಎಡ್‌ಕ್ವಾರ್ಟ್‌ ಸಂಸ್ಥೆಯ ಸಂಸ್ಥಾಪಕಿ ಸೆಲಿಹಾ, ವಿಧಾನ ಪರಿಷತ್‌ ಸದಸ್ಯ ರಮೇಶ್‌ಗೌಡ ಇತರರಿದ್ದರು.

ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ-

ನಮ್ಮಲ್ಲಿ ಸರ್ಕಾರಿ ಶಾಲೆಗಳು ಚೆನ್ನಾಗಿದೆ. ಆದರೆ, ಸರ್ಕಾರಿ ಶಾಲೆಯಲ್ಲಿ ಆಡಳಿತ ವ್ಯವಸ್ಥೆ ಸುಧಾರಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಮುಂದಿನ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಬರಲಿದೆ. ಇದರಿಂದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾಣೆಯಾಗಲಿದೆ.

ಪೂರ್ವ ಪ್ರಾಥಮಿಕ ತರಗತಿಗಳನ್ನು(ಪ್ಲೇ-ಹೋಂ, ಕಿಂಡರ್‌ ಗಾರ್ಡ್‌ನ, ಎಲ್‌ಕೆಜಿ, ಯುಕೆಜಿ) ಬೋಧಿಸುವ ಸಂಸ್ಥೆಗಳೂ ನಿರ್ದಿಷ್ಟ ಶಾಲಾವರಣಕ್ಕೆ ಬರಲಿದೆ ಹಾಗೂ ಅದಕ್ಕೂ ಮಾನ್ಯತೆ ಪಡೆಯಬೇಕಾಗುತ್ತದೆ. ನಮ್ಮಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಬೋಧಿಸುವ ಸಂಸ್ಥೆಗಳು ಸಾಕಷ್ಟಿವೆ. ಆದರೆ, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಅರಿತು, ಬೋಧಿಸುವ ಶಿಕ್ಷಕರ ಕೊರತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next