Advertisement

ನೆಮ್ಮಾರು: ರಸ್ತೆ ಕಾಮಗಾರಿಗೆ ಶ್ರಮದಾನ

07:13 AM May 19, 2020 | Suhan S |

ಶೃಂಗೇರಿ: ಮಳೆಗಾಲಕ್ಕೂ ಮುನ್ನ ನಾವು ಪ್ರತಿ ದಿನ ಸಂಚರಿಸುವ ರಸ್ತೆ ಸಮರ್ಪಕವಾಗಿರಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ಮಾವಿನಕಾಡು ರಂಗನಾಥ್‌ ಹೇಳಿದರು.

Advertisement

ನೆಮ್ಮಾರ್‌ ಗ್ರಾಪಂ ನ ಬುಕುಡಿಬೈಲಿನಿಂದ ವಳಲೆ ಮಾವಿನಕಾಡು ಸಂಪರ್ಕಿಸುವ ರಸ್ತೆಯಲ್ಲಿ ಭಾನುವಾರ ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ರಸ್ತೆಗಳ ನಿರ್ವಹಣೆ ಕೊರತೆಯಿಂದ ರಸ್ತೆ ಹಾಳಾಗುತ್ತದೆ. ಸರಕಾರವೇ ಎಲ್ಲಾ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರದಿಂದ ಮಾತ್ರ ರಸ್ತೆಯನ್ನು ಸುಸ್ಥಿತಿಯಲ್ಲಿಡಬಹುದಾಗಿದೆ ಎಂದರು.

ಕೃಷಿಕ ತಲಗಾರು ಆನಂದರಾವ್‌ ಮಾತನಾಡಿ, ರಸ್ತೆಯ ಗುಣಮಟ್ಟ ಕಾಪಾಡಿಕೊಳ್ಳಲು ರಸ್ತೆಗೆ ಬಾಗಿರುವ ಮರದ ರೆಂಬೆಯನ್ನು ಕಡಿಯಬೇಕು. ಇದಲ್ಲದೇ ವಿದ್ಯುತ್‌ ಮಾರ್ಗದ ಮರದ ರೆಂಬೆಯನ್ನು ತೆಗೆಯುವುದು ಅಗತ್ಯ ಎಂದರು. ಶ್ರಮದಾನದಲ್ಲಿ ಜಿಪಂ ಸದಸ್ಯ ಬಿ. ಶಿವಶಂಕರ್‌, ತಲಗಾರು ಉಮೇಶ್‌, ಜನಾರ್ಧನ್‌, ದಿವೀರ್‌ ಮಲಾ°ಡ್‌ ಮತ್ತಿತರರು ಇದ್ದರು. 50ಕ್ಕೂ ಹೆಚ್ಚು ಗ್ರಾಮಸ್ಥರು 5 ಕಿಮೀ ರಸ್ತೆಯ ಎರಡು ಬದಿ ಗಿಡಗಂಟಿಯನ್ನು ತೆಗೆದು ಹಾಕಿದರು. ಚರಂಡಿ ಸ್ವತ್ಛಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next