ಮುಂಬಯಿ: ವಿಶ್ವ ಮಾನವತಾವಾದಿ ಡಬ್ಲ್ಯುಎಚ್‌ಆರ್ ಪೀಪಲ್ಸ್ ಕೌನ್ಸಿಲ್ ಇದರ ವತಿಯಿಂದ ಆಯೋಜಿಸಿದ್ದ ಜಾಗತಿಕ ಮಾನವಾಧಿಕಾರ ಪ್ರತಿಭಾ ಮಹಾ
ಸಮ್ಮೇಳನ -2019 ಮತ್ತು ಅಂತಾರಾಷ್ಟ್ರೀಯ ಮಾನವಾಧಿಕಾರ ನೆಲ್ಸನ್ ಮಂಡೇಲಾ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರಧಾನ ಮತ್ತು ವಾರ್ಷಿಕ ಸಮ್ಮೇಳನವು ಮಾ. 31ರಂದು ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆಯಿತು.
ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಡಬ್ಲ್ಯುಎಚ್‌ಆರ್ ಪೀಪಲ್ಸ್ ಕೌನ್ಸಿಲ್ ವರ್ಲ್ಡ್ ಹ್ಯೂಮನ್ ರೈಟ್ಸ್‌ನ ಅಧ್ಯಕ್ಷ, ಸಮಾಜ ರತ್ನ, ಲಯನ್ ಡಾ| ಕೆ. ಟಿ. ಶಂಕರ ಅವರ ಅಧ್ಯಕ್ಷತೆಯಲ್ಲಿ ನಡೆದಸಮಾರಂಭದಲ್ಲಿ ನಗರದ ಸಮಾಜ ಸೇವಕ, ಉದ್ಯಮಿ, ಸಂಘಟಕ ಪೆರಾರ ಬಾಬು ಶೆಟ್ಟಿ ಅವರಿಗೆ ಪ್ರಶಸ್ತಿಯನ್ನು ಗಣ್ಯರ ಸಮ್ಮುಖ
ಪ್ರದಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬೆಹರೆನ್ ಡಬ್ಲ್ಯುಎಚ್‌ಆರ್‌ಪಿಸಿ ಇದರ ಅಧ್ಯಕ್ಷ ಲೀಲಾಧರ ಬೈಕಂಪಾಡಿ, ಗೋವಾ ರಾಜ್ಯಡಬ್ಲ್ಯುಎಚ್‌ಆರ್‌ಪಿಸಿ ಇದರ ಅಧ್ಯಕ್ಷ ಸುನೀಲ್ ಶೇಟ್, ರಾಷ್ಟ್ರೀಯ ಡಬ್ಲ್ಯುಎಚ್‌ಆರ್‌ಪಿಸಿ ಇದರ ಪ್ರಧಾನ ಕಾರ್ಯದರ್ಶಿ ಡಾ| ಎ. ಎನ್. ರಸನ್‌ಕುಟೆ, ತಮಿಳುನಾಡು ರಾಜ್ಯದ ಅಧ್ಯಕ್ಷ, ಡಬ್ಲ್ಯುಎಚ್‌ಆರ್‌ಪಿಸಿ ಇದರ ನಿರ್ದೇಶಕ ಮುಪ್ಪನಾರ ಮುರುಗನ್, ಭಾವುರಾಜ್ ತಯಾಡೆ ಮತ್ತು ರೆಖ್ ರಾಜ್, ಮಹಾರಾಷ್ಟ್ರ ಡಬ್ಲ್ಯುಎಚ್‌ಆರ್‌ಪಿಸಿ ಇದರ ಪಿಅರ್‌ಒ ಆಕಾಶವಾಣಿ ಗಾಯಕಿ ರೇಖಾ ಮಹಾಜನ್, ಉಪಾಧ್ಯಕ್ಷೆಯರಾದ ಸುಜಾತಾ ಕೋಟ್ಯಾನ್ ಮತ್ತು ಆಶಾ ಶೆಟ್ಟಿ, ಮಾನವ ಸೇವಾ ಸಂಘದ ಅಧ್ಯಕ್ಷ ನಂದಾ ಕಿಶೋರ್ ಪಾಟೀಲ…, ನಾಗ್ಪುರ ಡಬ್ಲ್ಯುಎಚ್‌ಆರ್‌ಪಿಸಿ ಇದರ ರಾಷ್ಟೀಯ ಕಾರ್ಯದರ್ಶಿ ಚಂದ್ರಕಾಂತ ವಿಶ್ರೋಜ್ವರ್, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷೆ ಯಶೋದಾ ನಾಗರಾಜ್ ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಚಂದ್ರಕಲಾ ಆರ್. ಶೆಟ್ಟಿ, ಕಾರ್ಯದರ್ಶಿ ಧರ್ಮೇಂದ್ರ ಪ್ರಜಾಪತಿ ಇವರು ಪಾಲ್ಗೊಂಡಿದ್ದರು.
ಸದಾಶಿವ ವಾಲ್ಪಾಡಿ, ವಸಂತಿ ಶೆಟ್ಟಿ, ಜ್ಯೋತಿ ಶೆಟ್ಟಿ, ಶಿರೋಡ್ಕರ್, ಸತೀಶ ಪೂಜಾರಿ, ಸದಾನಂದ ಪೂಜಾರಿ, ಗುಣಕಾಂತ ಶೆಟ್ಟಿ ಕರ್ಜೆ, ಶ್ರೆಯಾಸ್ ಪೂಜಾರಿ, ಪ್ರಥ್ವಿಶ್ ಶೆಟ್ಟಿ, ಧೃತಿ ಅಶೋಕ ಶೆಟ್ಟಿ, ದಿಶಾ ವೆಂಕಟೇಶ್ ಗೌಡ, ನೀಲಂ ಬಂದೇವಾಡ್ಕರ್ ಅವರು ಸಹಕರಿಸಿದರು. ನ್ಯಾಯವಾದಿ ನಯನ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶ ಭಕ್ತಿಯ ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು. ದೇಶ ವಿದೇಶಗಳಿಂದ ಅತಿಥಿಗಳು, ಗಣ್ಯರು, ಪದಾಧಿಕಾರಿಗಳು, ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.