Advertisement

ನೆಲ್ಯಾಡಿ ಬೆಥನಿ ಐಟಿಐ: ತಂತ್ರಾಂಶ ಪ್ರದರ್ಶನ, ಮಾಹಿತಿ ಕಾರ್ಯಾಗಾರ

03:35 AM Jun 02, 2018 | Karthik A |

ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಂಪ್ಯೂಟರ್‌ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಸೂಪರ್‌ ಮಾರ್ಕೆಟ್‌ ಬಿಲ್ಲಿಂಗ್‌, ವಿವಿಧ ಚರ್ಚ್‌ ದೇವಸ್ಥಾನ ಮಸೀದಿಗಳ ಸದಸ್ಯರ ಮಾಹಿತಿಗಳನ್ನು ದಾಖಲಿಸಿ ಮಾಹಿತಿ ನೀಡುವ ಹಾಗೂ ಮಿಲ್ಕ್ ಸೊಸೈಟಿ ಬಿಲ್ಲಿಂಗ್‌ ಮೊದಲಾದ ಕೆಲಸವನ್ನು ಸುಲಭಗೊಳಿಸುವ ತಂತ್ರಾಂಶಗಳ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಾಗಾರ ನೆಲ್ಯಾಡಿ ಬೆಥನಿ ಐಟಿಐನಲ್ಲಿ ಇತ್ತೀಚೆಗೆ ನಡೆಯಿತು. ತಂತ್ರಾಂಶವನ್ನು ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಸತ್ಯನ್‌ ತೋಮಸ್‌ ಅವರು ಪ್ರಾಂಶುಪಾಲ ಸಜಿ ಕೆ. ತೋಮಸ್‌ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

Advertisement


ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ| ಸತ್ಯನ್‌ ತೋಮಸ್‌ ತಂತ್ರಾಂಶಕ್ಕೆ ಸಹಕರಿಸಿದ ಕಂಪ್ಯೂಟರ್‌ ವಿಭಾಗದ ಅಧ್ಯಾಪಕ ಸುನಿಲ್‌ ಜೋಸೆಫ್ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು  ಸಲ್ಲಿಸಿದರು. ಅಧ್ಯಾಪಕ ಸುನಿಲ್‌ ಜೋಸೆಫ್ ಮಾತನಾಡಿದರು. ಅವಿನಾಶ್‌, ಅರುಣ್‌ ಕುಮಾರ್‌, ಸ್ನೇಹಾ ತೆರೇಸಾ, ಚೇತನಾ, ಮಹಮ್ಮದ್‌ ಅಲಿ, ಮೈತ್ರಿ, ಫ‌ವಾಸ್‌ ಶ್ರದ್ಧಾ ಚಾಕೋ, ಲಿನ್ಸಿ ಹಾಗೂ ಯೋಗೀಶ್‌ ಅಧ್ಯಾಪಕರಾದ  ಸುನಿಲ್‌ ಜೋಸೆಫ್ ಅವರ ಮಾರ್ಗದರ್ಶನದಲ್ಲಿ  ತಂತ್ರಾಂಶ ತಯಾರಿಸಿದರು. ಅಧ್ಯಾಪಕ ಸುನಿಲ್‌ ಜೋಸೆಫ್ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next