Advertisement
ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸರಕಾರವು ಗ್ರಾಮೀಣ ಪ್ರದೇಶದ ಪಟ್ಟಾದಾರರಿಗೆ ಬಹುಕಾಲದಿಂದ ಕಂದಾಯ ದಾಖಲೆಯಲ್ಲಿರುವ ಲೋಪ ದೋಷಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಸರಿಪಡಿಸಿ ಕೊಳ್ಳಬಹುದಾದ ವ್ಯವಸ್ಥೆಯನ್ನು ಈ ಪೋಡಿ ಮುಕ್ತ ಗ್ರಾಮ ಅನ್ನುವ ಕಾರ್ಯಸೂಚಿಯ ಮೂಲಕ ಸರಳೀಕರಣಗೊಳಿಸಿದೆ. ಇದರ ಉಪಯೋಗವನ್ನು ಗ್ರಾಮದ ಎಲ್ಲ ಜನರು ಪಡಕೊಳ್ಳುವಂತಾಗಲೀ ಎಂದರು.
ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಪೋಡಿ ಮುಕ್ತ ಗ್ರಾಮ. ಇದರ ಮಾಹಿತಿಯನ್ನು ಸಂಬಂಧ ಪಟ್ಟ ಇಲಾಖೆ ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ಕಾರ್ಯ ಇನ್ನೂ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ಪಟ್ಟಾದಾರರ ಹಳೆಯ ಕಂದಾಯ ಸಮಸ್ಯೆಗಳಾದ ಗಡಿ ಗುರುತು ತಕರಾರು, ಹಿಂದಿನಿಂದಲೂ ಗಡಿಯಲ್ಲಿರುವ ಗೊಂದಲಗಳನ್ನು ಗ್ರಾಮಮಟ್ಟದಲ್ಲಿ ಸ್ವತಃ ಸರ್ವೇ ಇಲಾಖೆಯವರೇ ಬಂದು ಪ್ಲಾಟಿಂಗ್ ಮೂಲಕ ಸರಿಪಡಿಸಲು ಇರುವ ಅತೀ ಅಗತ್ಯದ ಯೋಜನೆಯಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯೆ ಉಷಾ ಅಂಚನ್ ಹೇಳಿದರು.