Advertisement

ಇನ್ನೂ ಇಳಿಯದ ನೆರೆಯ ನೀರು!

10:25 PM Sep 09, 2019 | Sriram |

ಕುಂದಾಪುರ: ಕಳೆದ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಮಹಾ ನೆರೆಯ ನೀರು ಒಂದು ತಿಂಗಳು ಕಳೆದರೂ ಇನ್ನೂ ಇಳಿದಿಲ್ಲ. ಬಡಾಕೆರೆ, ನಾಡ, ಚಿಕ್ಕಳ್ಳಿ ಭಾಗದಲ್ಲಿನ ಭತ್ತದ ಗದ್ದೆಗಳು ಇನ್ನೂ ಸಂಪೂರ್ಣ ಜಲಾವೃತಗೊಂಡಿದ್ದು, ತೆಂಗಿನ ತೋಟದಲ್ಲಿಯೂ ನೀರು ನಿಂತಿದೆ.

Advertisement

ಕಳೆದ ಆ. 6 -7ರಂದು ಸುರಿದ ಭಾರೀ ಮಳೆ ಪರಿಣಾಮ ನಾವುಂದ, ನಾಡ, ಬಡಾಕೆರೆ ಭಾಗದಲ್ಲಿ ಮಹಾ ನೆರೆ ಪರಿಸ್ಥಿತಿ ಉಂಟಾಗಿತ್ತು. ಆಗಿನಿಂದ ಈವರೆಗೆ ನಿರಂತರ ಮಳೆಯಾಗುತ್ತಿರುವುದರಿಂದ, ಕೆಲವು ದಿನ ಮಳೆ ಕಡಿಮೆಯಾಗಿದ್ದರೂ, ನೆರೆಯ ನೀರು ಮಾತ್ರ ಕಡಿಮೆಯಾಗಿಲ್ಲ. ಇದರಿಂದ ಈ ಭಾಗದ ಸುಮಾರು 20ಕ್ಕೂ ಹೆಚ್ಚು ಎಕರೆ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ.

ನೀರು ನಿಂತಿರುವುದರಿಂದ ಗದ್ದೆಯಲ್ಲಿ ಬೆಳೆದಿರುವ ಭತ್ತದ ಪೈರು ಕೊಳೆಯುತ್ತಿದ್ದು, ಇದರಿಂದ ಈ ಬಾರಿಯ ಮುಂಗಾರಿನ ಭತ್ತದ ಕೃಷಿ ಸಂಪೂರ್ಣ ನಾಶವಾಗುವ ಭೀತಿ ರೈತರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next