Advertisement

ನೆರೆ ಸೇನೆ ಆಧುನೀಕರಣ ಅಪಾಯಕಾರಿ

08:47 AM Nov 12, 2018 | Team Udayavani |

ಹೊಸದಿಲ್ಲಿ: ಭಾರತದ ಗಡಿ ಭಾಗದಲ್ಲಿ ಸಂಭವಿಸ ಬಹುದಾದ ಯಾವುದೇ ದಾಳಿಯನ್ನೂ ಎದುರಿಸಲು ಭಾರತೀಯ ವಾಯುಪಡೆ ಸಮರ್ಥವಾಗಿದೆ. ಆದರೆ ನೆರೆ ದೇಶಗಳಲ್ಲಿನ ಅಭಿವೃದ್ಧಿ ದರ ಹಾಗೂ ಹೊಸ ಶಸ್ತ್ರಾಸ್ತ್ರಗಳ ಖರೀದಿಯು ಆತಂಕಕಾರಿ ಎಂದು ಐಎಎಫ್ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌  ಬಿ.ಎಸ್‌. ಧನೋವಾ ಹೇಳಿದ್ದಾರೆ. ಆದರೆ ಇದನ್ನು ಎದುರಿಸಲು ವಾಯು ಪಡೆದ ಸನ್ನದ್ಧವಾಗಿದೆ. ಗಡಿಯಲ್ಲಿ ಎದುರಾಗಬಹು ದಾದ ಯಾವುದೇ ದಾಳಿಯನ್ನೂ ವಾಯು ಪಡೆ ಸಮರ್ಥ ವಾಗಿ ಮಟ್ಟ ಹಾಕಲಿದೆ. 

Advertisement

ಸದ್ಯ ಸಮಸ್ಯೆ ಎದುರಾಗುತ್ತಿರುವುದು ವಿವಾದಿತ ಭೂಭಾಗದಲ್ಲಿ ಹಾಗೂ ವಿದೇಶಗಳು ಬೆಂಬಲಿಸುವ ಉಗ್ರರು ಮತ್ತು ಬಾಹ್ಯ ಶಕ್ತಿಗಳಿಂದ ಎಂದು ಧನೋವಾ ಹೇಳಿದ್ದಾರೆ.  ಪಾಕಿಸ್ಥಾನ ಮತ್ತು ಚೀನ ಸರಕಾರಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ಷಣಾ ಆಧುನೀಕರಣಗೊಳಿಸುತ್ತಿರುವುದನ್ನು ಅವರು ಪರೋಕ್ಷವಾಗಿ ಪ್ರಸ್ತಾವಿಸಿದ್ದಾರೆ. 

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಗಡಿ ನಿಯಂತ್ರಣ ರೇಖೆಯ ಆಚೆ ಸಕ್ರಿಯವಾಗಿರುವ ಉಗ್ರರ ತರಬೇತಿ ಶಿಬಿರಗಳನ್ನು ನಾಶ ಮಾಡುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ ಅದನ್ನು ಐಎಎಫ್ ಮುಖ್ಯಸ್ಥರು ನಿರಾಕರಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next