Advertisement

ನೆಹರು ಆರ್‌ಎಸ್‌ಎಸ್ ನವರನ್ನು ಸಂಪುಟಕ್ಕೆ ಸೇರಿಸಿಕೊಂಡ ಮಹಾನ್ ನಾಯಕ: ಸುಧಾಕರನ್

10:06 PM Nov 14, 2022 | |

ಕಣ್ಣೂರು: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಆರ್‌ಎಸ್‌ಎಸ್ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದ ಮಹಾನ್ ನಾಯಕ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ ಸೋಮವಾರ ಹೇಳಿ ಆಡಳಿತಾರೂಢ ಸಿಪಿಐ(ಎಂ) ಮತ್ತು ಮುಸ್ಲಿಂ ಲೀಗ್ ಅನ್ನು ಕೆರಳಿಸಿದ್ದಾರೆ ಮತ್ತು ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ್ದಾರೆ.

Advertisement

ನೆಹರು ಅವರ ಜನ್ಮದಿನವನ್ನು ಆಚರಿಸಲು ಕಣ್ಣೂರು ಡಿಸಿಸಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸುಧಾಕರನ್, ನೆಹರು ದಶಕಗಳ ಹಿಂದೆ ಆರ್‌ಎಸ್‌ಎಸ್ ಶಾಖೆಗಳಿಗೆ ರಕ್ಷಣೆ ನೀಡಿದ್ದರು ಎಂದು ಹೇಳಿದ್ದಾರೆ.

“ಆರೆಸ್ಸೆಸ್ ನಾಯಕರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಅವರನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಳ್ಳಲು ನೆಹರು ತೋರಿದ ಉದಾರತೆ ಕೋಮುವಾದಿ, ಫ್ಯಾಸಿಸಂನೊಂದಿಗೆ ಒಗ್ಗೂಡುವ ಅವರ ದೊಡ್ಡತನ.ಪ್ರಜಾಪ್ರಭುತ್ವದ ಶ್ರೇಷ್ಠ ಮೌಲ್ಯಗಳನ್ನು ರಾಷ್ಟ್ರಕ್ಕೆ ತೋರಿಸಿದ ನಾಯಕ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರಲ್ಲದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಜವಾಬ್ದಾರಿಯನ್ನು ನೆಹರು ನೀಡಿದ್ದಾರೆ ಎಂದು ಸುಧಾಕರನ್ ಹೇಳಿದ್ದಾರೆ.

“ನಾವು ನೆಹರೂ ಅವರಿಂದ ಬಹಳಷ್ಟು ಕಲಿಯಬೇಕು, ನಾವು ಅವರಿಂದ ಬಹಳಷ್ಟು ಅರ್ಥಮಾಡಿಕೊಳ್ಳಬೇಕು, ಅವರ ಮನಸ್ಸಿನ ಬಗ್ಗೆ ತಿಳಿದುಕೊಳ್ಳಲು ಒಬ್ಬರು ಅವರ ಬಗ್ಗೆ ಓದಬೇಕು ಮತ್ತು ಕಲಿಯಬೇಕು” ಎಂದು ಕೆಪಿಸಿಸಿ ಮುಖ್ಯಸ್ಥರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next