Advertisement
ಪಟ್ಟಣ ಪುರಸಭೆ ಆಡಳಿತ ಪ್ರತಿ ವರ್ಷದ ಬಜೆಟ್‌ನಲ್ಲಿ ಪಾರ್ಕ್ ನಿರ್ವಹಣೆಗೆ ಇಂತಿಷ್ಟು ಹಣ ಎಂದು ಮೀಸಲಿಡುತ್ತಿದ್ದರೂ ಸಹ ನೆಹರು ಪಾರ್ಕ್ ನಿರ್ವಹಣೆ ಮಾಡುವಲ್ಲಿ ಪುರಸಭೆ ಆಡಳಿತ ವರ್ಗ ಹಾಗೂ ಅಧಿಕಾರಿಗಳು ವರ್ಗದವರು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಿದ್ದಲ್ಲಿ ಪಾರ್ಕ್ ನಿರ್ವಹಣೆಗೆಂದು ಮೀಸಲಿರಿ ಸಿದ ಹಣ ಏನಾಯಿತು ಎಂದು ಪಟ್ಟಣದ ನಿವಾಸಿಗಳು ಪ್ರಶ್ನಿಸಿದ್ದಾರೆ.
Related Articles
Advertisement
ಕೆಟ್ಟು ನಿಂತ ಕುಡಿಯುವ ನೀರಿನ ಘಟಕ
ಸುಮಾರು 15 ವರ್ಷಗಳ ಹಿಂದೆ ರಾಜಸ್ಥಾನಿ ಸಮಾಜದವರು ಸಾರ್ವಜನಿಕರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಪಾರ್ಕ್ ಎಡಭಾಗದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ ಪುರಸಭೆಗೆ ಹಸ್ತಾಂತರ ಮಾಡಿದ್ದರು. ಆದರೆ ನಿರ್ವಹಣೆ ಕೊರತೆಯಿಂದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು, ಜನರು ಸುತ್ತಮುತ್ತಲಿನ ಹೋಟೆಲ್‌ಗಳಿಗೆ ತೆರಳಿ ನೀರು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶೀಘ್ರವಾಗಿ ನೀರಿನ ಘಟಕ ದುರಸ್ತಿ ಪಡಿಸಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಟೋ ಚಾಲಕ ಶ್ರೀನಿವಾಸ್ ಮನವಿ ಮಾಡಿದರು.
ನೆಹರು ಪಾರ್ಕ್‌ನಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ತೆರವುಗೊಳಿಸಿ, ಸೂಕ್ತ ಆಸನಗಳ ವ್ಯವಸ್ಥೆ ಕಲ್ಪಿಸುವ ಜೊತೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು. ಕುಡಿಯುವ ನೀರಿನ ಘಟಕವನ್ನೂ ದುರಸ್ತಿಗೊಳಿಸಲು ಕ್ರಮ ವಹಿಸಲಾಗುವುದು. ● ಹೇಮಂತ್ ರಾಜ್, ಮುಖ್ಯಾಧಿಕಾರಿ, ಪುರಸಭೆ
ಪಾರ್ಕ್ ನಿರ್ವಹಣೆ ಸೇರಿದಂತೆ ಇನ್ನಿತರ ಹಲವು ಸಮಸ್ಯೆಗಳ ಕುರಿತು ಮುಖ್ಯಾಧಿಕಾರಿ ಗಮನಕ್ಕೆ ತಂದರೂ ಸಹ ಅವರು ಆಡಳಿತ ಪಕ್ಷದ ಕೈಗೊಂಬೆಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಮುಖ್ಯಾಧಿಕಾರಿ ಬೇಜವಾಬ್ದಾರಿತನದಿಂದ ಪಟ್ಟಣದ ಅಭಿವೃದ್ಧಿ ಕುಂಠಿತವಾಗುತ್ತಿದೆ. ● ಎನ್.ಕುಮಾರ್, ಪುರಸಭೆ ಸದಸ್ಯ
● ಬಸವರಾಜು ಎಸ್.ಹಂಗಳ