Advertisement
ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಆಯೋಜಿಸಲಾಗಿದ್ದ ದೇಶ ವಿಭಜನೆಯ ದುರಂತ ಘಟನೆಗಳು ಎಂಬ ಪತ್ರಿಕಾ ವರದಿಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ, ವೀಕ್ಷಣೆ ಮಾಡಿದ ಬಳಿಕ ಅವರು ಮಾತನಾಡಿದರು. ಕಾಂಗ್ರೆಸ್‌ನವರಿಗೆ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನು ಮರೆಸಿ ಬಿಟ್ಟಿದ್ರಲ್ಲಾ, ಅವರು ಎಲ್ಲೂ ಇಲ್ಲದಂಗೆ ಮಾಡಿದ್ರು. ಆಗ ಇವರಿಗೆ ನೆನಪಾಗಿಲ್ವಾ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸರ್ದಾರ್ ವಲ್ಲಭಾಯ್ ಪಟೇಲ್ ಅವರನ್ನು ಮರೆಸಿದ್ರು. ಯಾವುದೇ ಒಬ್ಬರಿಂದ ಸ್ವಾತಂತ್ರ್ಯ ಬಂದಿದೆ ಅನ್ನೋ ಪರಿಕಲ್ಪನೆ ತಪ್ಪು. ಅನೇಕ ಜನ ಪ್ರಾಣ ಬಲಿದಾನ ಮಾಡಿದ್ದಾರೆ ಎಂದರು.
Related Articles
ವಯಸ್ಸಿನ ರಾಹುಲ್ ಗಾಂಧಿ ಮುಂದೆ ದೆಹಲಿಗೆ ಹೋಗಿ ಕೈಕಟ್ಟಿಕೊಂಡು ನಿಲ್ತಾರೆ, ದಿನಗಟ್ಟಲೇ ಕಾಯ್ತಾರೆ ಅವರ ಮೇಲಿದ್ದ ಗೌರವ, ಸ್ವಾಭಿಮಾನ ಅಲ್ಲಿಗೆ ಮುಗಿಯಿತು ಎಂದರು.
Advertisement
ಕರಾಳ ದಿನ: ಸಿಎಂ ಫೋಟೊ ವೀಕ್ಷಣೆಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಆಯೋಜಿಸಲಾಗಿದ್ದ “ದೇಶ ವಿಭಜನೆಯ ದುರಂತ ಘಟನೆಗಳು’ ಎಂಬ ಪತ್ರಿಕಾ ವರದಿಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ರವಿಕುಮಾರ್, ಕೇಶವ ಪ್ರಸಾದ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ನೇತೃತ್ವದಲ್ಲಿ ಭಾಷ್ಯಂ ವೃತ್ತದಲ್ಲಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ದೇಶ ವಿಭಜನೆಯ ಕರಾಳ ದಿನದ ಅಂಗವಾಗಿ ಭಾಷ್ಯಂ ವೃತ್ತದಿಂದ ಮಲ್ಲೇಶ್ವರಂನ ಬಿಜೆಪಿ ಕಚೇರಿ ವರೆಗೂ ಮೌನ ಮೆರವಣಿಗೆ ನಡೆಸಲಾಯಿತು. ಕರಾಳ ದಿನ ನೋಡಿದಾಗ ಕಣ್ಣಲ್ಲಿ ನೀರು ಬರುತ್ತೆ
ದೇಶ ವಿಭಜನೆಯ ಕರಾಳ ದಿನವನ್ನು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಪೂರ್ವ ಹಾಗೂ ಪಶ್ಚಿಮ ದೇಶ ವಿಭಜನೆ ಆದಾಗ 10 ಲಕ್ಷ ಜನರು ವಲಸೆ ಆದರು. ದೊಡ್ಡ ಹಿಂಸಾಚಾರ, ಸಾವು-ನೋವು ಆಯಿತು. ಬಹಳಷ್ಟು ಕಡೆ ಹಸಿವಿನಿಂದ ಸತ್ತರು. ಇದು ಯಾಕೆ ಆಯಿತು ಎಂದು ಇತಿಹಾಸದಲ್ಲಿ ದಾಖಲೆ ಇದೆ. ಇದಕ್ಕೆ ಯಾರೆಲ್ಲ ಕಾರಣ ಅಂತಾನೂ ದಾಖಲೆ ಇದೆ. ಇದೊಂದು ದೊಡ್ಡ ದುರಂತ. ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ದೇಶವನ್ನು ಒಡೆಯುವ ಕೆಲಸ ಆಗಿದೆ. ರಕ್ತ ಭೂಮಿಗೆ ಚಲ್ಲಿದ್ದಾರೆ. ಸ್ವಾತಂತ್ರ್ಯ ಸಮಯದಲ್ಲಿ ಪ್ರಾಣ ಹೋಯಿತು. ವಿಭಜನೆ ಸಮಯದಲ್ಲಿ ಪ್ರಾಣ ಹೋಯಿತು. ದೇಶ ಒಂದಾಗಿದ್ದರೆ ಇಂತಹ ಘಟನೆ ತಪ್ಪಿಸಬಹುದಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.