Advertisement

ಗೋಮಾಂಸ,ಹಂದಿ ಮಾಂಸ ಭಕ್ಷಿಸುತ್ತಿದ್ದ ನೆಹರು ಪಂಡಿತ ಹೇಗೆ:ಬಿಜೆಪಿ ಶಾಸಕ

10:40 AM Aug 11, 2018 | |

ಹೊಸದಿಲ್ಲಿ: ‘ಗೋಮಾಂಸ ಮತ್ತು ಹಂದಿಮಾಂಸವನ್ನು ಭಕ್ಷಿಸುತ್ತಿದ್ದ  ದೇಶದ ಪ್ರಥಮ ಪ್ರಧಾನಿ ಜವಹಾರ್‌ ಲಾಲ್‌ ನೆಹರು ಅವರನ್ನು ಪಂಡಿತ ಎಂದು ಕರೆಯುವುದು ಹೇಗೆ’ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಜ್ಞಾನ್‌ ದೇವ್‌ ಅಹುಜಾ ಪ್ರಶ್ನಿಸಿದ್ದಾರೆ. 

Advertisement

ಸದಾ ಆಕ್ರಮಣಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುವ ರಾಜಸ್ಥಾನದ ಅಲ್ವಾರ್‌ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ್‌ ದೇವ್‌ ‘ನೆಹರು ಪಂಡಿತರಲ್ಲವೇ ಅಲ್ಲ. ಆ ಪೂರ್ವ ಪ್ರತ್ಯಯವನ್ನು ಕಾಂಗ್ರೆಸ್‌ ಪಕ್ಷ ಅವರ ಹೆಸರಿನಲ್ಲಿ ಸೇರಿಸಿದ್ದು’ ಎಂದಿದ್ದಾರೆ. 

ಶುಕ್ರವಾರ ದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿದ್ದ ಜ್ಞಾನ್‌ ದೇವ್‌ ಈ ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. 

‘ರಾಹುಲ್‌ ಗಾಂಧಿ ಎಂದಿಗೂ ಅಜ್ಜಿ ಇಂದಿರಾ ಗಾಂಧಿ ಅವರೊಂದಿಗೆ ದೇಗುಲಗಳಿಗೆ ಭೇಟಿ ನೀಡಿಲ್ಲ. ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಹೇಳಿಕೆ ಸುಳ್ಳು. ಅದನ್ನು ನಿಜ ಮಾಡಿದಲ್ಲಿ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ,ನಿಜವಾಗಿಸಲು ಸಾಧ್ಯವಾದಲ್ಲಿ ಸಚಿನ್‌ ಪೈಲಟ್‌ ರಾಜಕೀಯ ಕ್ಷೇತ್ರ ಬಿಡಬೇಕು’ ಎಂದು ಸವಾಲೆಸೆದರು. 

Advertisement

Udayavani is now on Telegram. Click here to join our channel and stay updated with the latest news.

Next