Advertisement

ಅಭಿವೃದ್ಧಿಯ ಹರಿಕಾರ ನೆಹರು ಓಲೇಕಾರ

11:10 AM Aug 30, 2022 | Team Udayavani |

ಜನಸೇವೆ-ಸಮಾಜಸೇವೆ ಎಂಬುದು ಹೇಳಿ ಕೊಟ್ಟ ಪಾಠ ಹಾಗೂ ತರಬೇತಿಯಿಂದ ಬರುವಂತಹದ್ದಲ್ಲ. ಅದು ಅಂತರಾತ್ಮದಲ್ಲಿ ಮೂಡಬೇಕು. ಅಂತಹ ಚಿಂತನೆ, ಸೇವೆ ಸಲ್ಲಿಸುವ ಮನೋಭಾವ ರೂಢಿಸಿಕೊಂಡಿರುವ ನೇರ-ನಿಷ್ಠುರ ವ್ಯಕ್ತಿತ್ವದ ಶಾಸಕರು ಯಾರಾದರೂ ಇದ್ದರೆ ಅವರೇ ಶಾಸಕ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ನೆಹರು ಓಲೇಕಾರ. ಅಭಿವೃದ್ಧಿ ಪರ ಯೋಜನೆಗಳ ಮೂಲಕ ಹಾವೇರಿ ಮತಕ್ಷೇತ್ರದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Advertisement

ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಇಡೀ ದೇಶವೇ ಅಭಿವೃದ್ಧಿಯತ್ತ ಸಾಗುತ್ತದೆ ಎಂಬ ವಿಚಾರಧಾರೆ ಹೊಂದಿರುವ ಶಾಸಕ ನೆಹರು ಓಲೇಕಾರ ಅವರು ಹಾವೇರಿ ಮತಕ್ಷೇತ್ರದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರ ಅನುದಾನ ಜತೆ ವಿಶೇಷ ಅನುದಾನ ಮಂಜೂರು ಮಾಡಿಸಿದ್ದಾರೆ. ಮತಕ್ಷೇತ್ರದಲ್ಲಿ ಎಲ್ಲ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ನಾಗಾಲೋಟ ಮುಂದುವರಿಸಿದ್ದಾರೆ. ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವ ಮಾತೃಹೃದಯಿ ಇವರಾಗಿದ್ದಾರೆ. ನ್ಯಾಯಕ್ಕಾಗಿ, ಬಡವರಿಗಾಗಿ, ದೀನದಲಿತರ ಏಳ್ಗೆಗಾಗಿ, ಅಲ್ಪಸಂಖ್ಯಾತರ ಹಿತಕ್ಕಾಗಿ, ರೈತರ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಹೈಟೆಕ್‌ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಸಮುದಾಯ ಭವನಗಳು ಸೇರಿದಂತೆ ಹಲವಾರು ಜನಪರ ಕಾರ್ಯಗಳನ್ನು ಮಾಡಿ ಅಭಿವೃದ್ಧಿಯ ಹರಿಕಾರ ಎನಿಸಿದ್ದಾರೆ.

ಶೈಕ್ಷಣಿಕ ಅಭಿವೃದ್ಧಿ..
– ಎಸ್‌ಸಿ, ಎಸ್‌ಟಿ ಕಾಲೇಜು ವೀರಾಪುರ ಗುಡ್ಡ – 25 ಕೋಟಿ ರೂ.
– ಕಳ್ಳಿಹಾಳ ಗುಡ್ಡದಲ್ಲಿ ಮೊರಾರ್ಜಿ ವಸತಿ ನಿಲಯ- 22 ಕೋಟಿ ರೂ.
– ಹೊಸರಿತ್ತಿಯಲ್ಲಿ ಮೊರಾರ್ಜಿ(ಅಲ್ಪಸಂಖ್ಯಾತರ) ಹಿಂದುಳಿದ ವರ್ಗ ಶಾಲೆ-22 ಕೋಟಿ ರೂ.
– ಹೊಸರಿತ್ತಿ ಡಿಗ್ರಿ ಕಾಲೇಜು-ಎಸ್‌ಟಿ ಮೊರಾರ್ಜಿ ಶಾಲೆ-25 ಕೋಟಿ ರೂ.
– ಗಾಂಧಿಪುರ ಡಿಗ್ರಿ ಕಾಲೇಜು-ಮೊದಲನೇ ಹಂತ 15 ರೂಮ್‌ಗಳು, ಎರಡನೇ ಹಂತದಲ್ಲಿ 40 ರೂಮ್‌ಗಳು, ನಂತರ ಆಡಿಟೋರಿಯಮ್‌ ಹಾಲ್‌ ನಿರ್ಮಾಣ-11 ಕೋಟಿ ರೂ.
– ಕರ್ಜಗಿ ಡಯಟ್‌ ಕಾಲೇಜು-ಮೊದಲನೇ ಹಂತದಲ್ಲಿ, ನಂತರದಲ್ಲಿ ಹಿಂದುಳಿದವರ ಮೊರಾರ್ಜಿ ವಸತಿ ಶಾಲೆ ಹಾಗೂ ಪಿಯು ವಸತಿ ಶಾಲೆ-45 ಕೋಟಿ ರೂ.
– ಹಾವೇರಿಯ ನಾಗೇಂದ್ರಮಟ್ಟಿಯಲ್ಲಿ ಒಂದು ಪ್ರೌಢಶಾಲೆ(ಉರ್ದು), ಒಂದು ಪ್ರಾಥಮಿಕ ಶಾಲೆ ಕನ್ನಡ ಮಾಧ್ಯಮ ಮಂಜೂರು.
– ಹಾವೇರಿ ನಗರದಲ್ಲಿ ಮಹಿಳಾ ಡಿಗ್ರಿ ಕಾಲೇಜು ಮಂಜೂರು ಹಾಗೂ ನೂತನ ಕಟ್ಟಡ ನಿರ್ಮಾಣ- 6 ಕೋಟಿ ರೂ.
– ಹಾವೇರಿಯ ಇಜಾರಿಲಕಮಾಪುರ ಮಹಿಳಾ ಕಾಲೇಜಿಗೆ 1 ಎಕರೆ ಜಮೀನು ಮಂಜೂರು, ಎರಡನೇ ಹಂತದಲ್ಲಿ 3 ಕೋಟಿ ರೂ.ಗಳಲ್ಲಿ ಕಟ್ಟಡ ನಿರ್ಮಾಣ.
– ಹಾವೇರಿಯಲ್ಲಿ ಮೆಡಿಕಲ್‌ ಕಾಲೇಜು ಕಟ್ಟಡ ನಿರ್ಮಾಣ ಹಂತದಲ್ಲಿದೆ-600 ಕೋಟಿ ಮಂಜೂರು.
– ಕಾನೂನು ಮಹಾವಿದ್ಯಾಲಯ-5 ಕೋಟಿ ರೂ. ಮಂಜೂರು.
– ಜಿಟಿಡಿಸಿ ಟ್ರಾಮಾ ಸೆಂಟರ್‌-11ಕೋಟಿ ರೂ.
– ಹಾವೇರಿಯ ಹೆಗ್ಗೇರಿ ರಸ್ತೆಯಲ್ಲಿ ಐಟಿಐ ಕಾಲೇಜು ಮಂಜೂರು-1.5 ಕೋಟಿ, ಅದರ ಹಿಂಭಾಗ ಟಾಟಾ ಟೂಲ್ಸ್‌ ಕಿಟ್‌ ತರಬೇತಿ ಕೇಂದ್ರ ನಿರ್ಮಾಣ-2ಕೋಟಿ ರೂ.
– ಹಾವೇರಿ ನಗರದಲ್ಲಿ ಮೆಟ್ರಿಕ್‌ ನಂತರ ವಿದ್ಯಾನಿಲಯ, ಹೊಸನಗರದಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯ ಮಂಜೂರು.
– ಗುತ್ತಲ ಪಟ್ಟಣದಲ್ಲಿ ಜ್ಯೂನಿಯರ್‌ ಕಾಲೇಜು ಕಟ್ಟಡ ನಿರ್ಮಾಣ-1ಕೋಟಿ ರೂ.
– ಗುತ್ತಲಕ್ಕೆ ಐಟಿಐ ಕಾಲೇಜು-3ಕೋಟಿ ರೂ. ಮಂಜೂರು.
– ಹಿರೇಮರಳಿಹಳ್ಳಿ ಗ್ರಾಮದಲ್ಲಿ ಇಂದಿರಾ ವಸತಿ ನಿಲಯ-23ಕೋಟಿ ರೂ. ಮಂಜೂರು.

ಭವನಗಳ ನಿರ್ಮಾಣ
– ಹಾವೇರಿಯಲ್ಲಿ ಅಂಬೇಡ್ಕರ್‌ ಭವನ 5 ಕೋಟಿ ರೂ.
– ಹಾವೇರಿಯಲ್ಲಿ ವಾಲ್ಮೀಕಿ ಭವನ 5 ಕೋಟಿ ರೂ.
– ಬಂಜಾರ ಭವನ 3 ಕೋಟಿ ರೂ.
– ಹಾವೇರಿಯಲ್ಲಿ ಗಾಂಧಿ  ಭವನ 4 ಕೋಟಿ ರೂ.
– ಹಾವೇರಿಯಲ್ಲಿ ರಂಗಮಂದಿರ 6.35 ಕೋಟಿ ರೂ.
– ಹಾವೇರಿ ನಗರದಲ್ಲಿ ನಿರಾಶ್ರಿತರ ಭವನ
– ಹಾವೇರಿಯಲ್ಲಿ ವಾಚನಾಲಯ (ಮಹಾದೇವ ಬಣಕಾರ)
– ಹಾವೇರಿ ನಗರದಲ್ಲಿ ಪತ್ರಕರ್ತರ ಭವನ
– ಹಾವೇರಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಟ್ಟಡ ನಿರ್ಮಾಣ
– ಹಾವೇರಿಯಲ್ಲಿ ಗ್ಲಾಸ್‌ ಹೌಸ್‌ ನಿರ್ಮಾಣ 5ಕೋಟಿ ರೂ.
– ಹಾವೇರಿಯಲ್ಲಿ ಎಸ್‌ಪಿ ಆಫೀಸ್‌ ನೂತನ ಕಟ್ಟಡ.
– ಕರ್ಜಗಿಯಲ್ಲಿ ಹಾಲು ಒಕ್ಕೂಟ
– ದೇವರಾಜ ಅರಸು ಭವನ.
– ಹಾವೇರಿಯಲ್ಲಿ ಪಾನೀಯ ನಿಗಮ.
– ದೇವರಾಜ ಅರಸು ಭವನ.

ತಡೆಗೋಡೆ ನಿರ್ಮಾಣ
– ಕಡಕೋಳ (ಬಸವನಕೊಪ್ಪ) ಕೆರೆ ಅಭಿವೃದ್ಧಿ- 1 ಕೋಟಿ ರೂ.
– ಹತ್ತಿಮತ್ತೂರ ಕೆರೆ ಅಭಿವೃದ್ಧಿ-1.5 ಕೋಟಿ ರೂ.
– ಒಳಾಂಗಣ ಕ್ರೀಡಾಂಗಣ, ಈಜುಕೊಳ, ಶಟಲ್‌ ಕಾಕ್‌ ಗ್ರೌಂಡ್‌ ನಿರ್ಮಾಣ
– ನ್ಪೋರ್ಟ್ಸ್ ಮಹಿಳಾ ಹಾಸ್ಟೆಲ್‌
– ಜಿಲ್ಲಾ ಕೋರ್ಟ್‌ ಕಾಂಪ್ಲೆಕ್ಸ್‌
– ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ 20 ಕೋಟಿ ರೂ.

Advertisement

ವೃತ್ತಗಳ ನಿರ್ಮಾಣ
– ಸಂಗೂರ ಕರಿಯಪ್ಪ ಸರ್ಕಲ್‌
– ವಿ.ಕೃ.ಗೋಕಾಕ ಸರ್ಕಲ್‌
– ಅಂಬೇಡ್ಕರ್‌ ಪುತ್ಥಳಿ ನಿರ್ಮಾಣ
– ಹಾವೇರಿಯಲ್ಲಿ ವಾಲ್ಮೀಕಿ ಸರ್ಕಲ್‌ ನಿರ್ಮಾಣ ಹಂತದಲ್ಲಿ.
– ಹಾವೇರಿಯಲ್ಲಿ ಚನ್ನಮ್ಮ ಸರ್ಕಲ್‌
– ಹಾವೇರಿಯಲ್ಲಿ ಗಾಂಧಿ  ಸರ್ಕಲ್‌
– ಹಾವೇರಿಯಲ್ಲಿ ರಾಯಣ್ಣ ಸರ್ಕಲ್‌
– ಹಾವೇರಿಯಲ್ಲಿ ಬಸವೇಶ್ವರ ಸರ್ಕಲ್‌
– ಹಾವೇರಿಯಲ್ಲಿ ಶಿವಲಿಂಗೇಶ್ವರ ಸರ್ಕಲ್‌
– ಹಾವೇರಿಯಲ್ಲಿ ಸಿದ್ಧರಾಮೇಶ್ವರ ಸರ್ಕಲ್‌

ಆಸ್ಪತ್ರೆ ಕಟ್ಟಡಗಳು-ಮೇಲ್ದರ್ಜೆಗೆ..
– ಜಿಲ್ಲಾಸ್ಪತ್ರೆ 1ನೇ ಹಂತದ್ದು ಕಟ್ಟಡ ನಿರ್ಮಾಣ 23ಕೋಟಿ ರೂ.,ಈ ವರ್ಷದಲ್ಲಿ ಕಟ್ಟಡದ ಮೇಲ್ಭಾಗದ ನಿರ್ಮಾಣಕ್ಕೆ 3 ಕೋಟಿ ರೂ.
– ನರ್ಸಿಂಗ್‌ ಕಾಲೇಜು ಮಂಜೂರಾತಿ
– ಗುತ್ತಲ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ
– ಮೇವುಂಡಿಯಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿ ಮತ್ತು ಕಟ್ಟಡ ನಿರ್ಮಾಣ.
– ಕನಕಾಪುರ, ಬಸಾಪುರ, ಕಡಕೋಳ, ಬೆಳವಿಗಿ ಮತ್ತು ಅಗಡಿ ಗ್ರಾಮದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣ

ಪಶು ಆಸ್ಪತ್ರೆಗಳು
– ಹಾವೇರಿ ನಗರದಲ್ಲಿ 2 ಕೋಟಿ ರೂ. ಮಂಜೂರು.
– ಪಶು ಕಲ್ಯಾಣ ಕ್ಲಿನಿಕ್‌ ನಿರ್ಮಾಣ 1 ಕೋಟಿ ರೂ.
– ಅಗಡಿ, ಯಲಗಚ್ಚ, ಕರ್ಜಗಿ, ಬೆಳವಿಗಿ, ಕಡಕೋಳ, ಹಿರೇಮುಗದೂರ, ಯಲವಿಗಿಯಲ್ಲಿ ಪಶು ಆಸ್ಪತ್ರೆಗಳ ಮಂಜೂರು.

ಜೆ.ಜೆ.ಎಂ. ಯೋಜನೆ ವಿವಿಧ ಯೋಜನೆಗಳು..
– ಮನೆ ಮನೆಗೆ ಗಂಗೆ ಯೋಜನೆ
– ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ವಾಣಿಜ್ಯ ಮಳಿಗೆ ನಿರ್ಮಾಣ.
– ಕೆಎಸ್‌ಆರ್‌ಟಿಸಿ-ಡಿಪೋ, ತರಬೇತಿ ಕೇಂದ್ರ ನಿರ್ಮಾಣ.
– ಹಾವೇರಿ-ಗ್ರಾಮಾಂತರ ಪ್ರದೇಶಗಳಲ್ಲಿ ಸಂತೆಕಟ್ಟೆ ನಿರ್ಮಾಣ.
– ಹೈಮಾಸ್ಟ್‌-ಶುದ್ಧ ನೀರಿನ ಘಟಕಗಳ ನಿರ್ಮಾಣ.
– ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜೆನ್‌ ಪ್ಲಾಂಟ್‌.
– ಮೆಟ್ರಿಕ್‌ ನಂತರ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣ.
– ಹೊಸರಿತ್ತಿಯಲ್ಲಿ ನದಿಗೆ ಬಿಡ್ಜ್ ನಿರ್ಮಾಣ.
– ಹಾವನೂರಿನಿಂದ ಶಾಖಾರದವರೆಗೆ ಬಿಡ್ಜ್ ನಿರ್ಮಾಣ.
– ಕೋಣನತಂಬಿಗಿ ಹಿರೇಮರಳಿಹಳ್ಳಿಗೆ ನಡುವೆ ಬ್ರಿಡ್ಜ್ ನಿರ್ಮಾಣ-3 ಕೋಟಿ ರೂ.
– ವಿವಿಐಪಿ ಸಕ್ಯುìಟ್‌ ಹೌಸ್‌ ನಿರ್ಮಾಣ- 12 ಕೋಟಿ ರೂ.
– ಕರ್ಜಗಿ, ಗಳಗನಾಥ, ಹಿರೇಮರಳಿಹಳ್ಳಿಯಲ್ಲಿ ಕೆರೆಗೆ ನೀರು ತುಂಬಿಸುವುದು.. ಕನವಳ್ಳಿ, ಬರಡಿ, ಕೊರಗುಂದ, ಬಸಾಪುರ, ಹಳೇರಿತ್ತಿ, ಗುತ್ತಲ, ನೆಗಳೂರು, ಅಗಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ.

ಹಾವೇರಿ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಎಷ್ಟೇ ಕೆಲಸ ಮಾಡಿದರೂ ಜನರ ಋಣ ತೀರಿಸಲು ಸಾಧ್ಯವಿಲ್ಲ. ಹಾವೇರಿ ಮತಕ್ಷೇತ್ರದ ಜನರಿಗೆ ಕೇಂದ್ರ-ರಾಜ್ಯ ಸರ್ಕಾರದ ಲಾಭ ಸಿಗಬೇಕೆಂಬುದು ನಮ್ಮ ಬಯಕೆಯಾಗಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುವ ಮೂಲಕ ಕ್ಷೇತ್ರದ ಜನರಿಗೆ ಮೂಲಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ.
– ಸನ್ಮಾನ್ಯ ಶ್ರೀ ನೆಹರು ಓಲೇಕಾರ, ಶಾಸಕರು ಹಾಗೂ ಅಧ್ಯಕ್ಷರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಆಯೋಗ, ಕರ್ನಾಟಕ ಸರ್ಕಾರ ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next