ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ವರ್ಷಗಳಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ಲಕ್ಷಿಸಿರುವ ಪರಿಣಾಮವಾಗಿ ಕೋವಿಡ್ 19 ಸೊಂಕನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಲು ಸಾಧ್ಯವಾಗಿರಲಿಲ್ಲ ಎಂದು ಐಐಎಸ್ಸಿ ನಿವೃತ್ತ ನಿರ್ದೇಶಕ ಪದ್ಮಭೂಷಣ ಡಾ.ಪಿ.ಬಲರಾಮ್ ಕಳವಳ ವ್ಯಕ್ತಪಡಿಸಿದರು.
ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ 22ನೇ ಘಟಿಕೋತ್ಸವದಲ್ಲಿ ಮಾತ ನಾಡಿ, ಕೋವಿಡ್ 19 ಸಮರ್ಥವಾಗಿ ಎದುರಿ ಸಲು ವಿಶ್ವದ ಮುಂದುವರಿದ ರಾಷ್ಟ್ರಗಳಿಗೂ ಸಾಧ್ಯ ವಾಗಿಲ್ಲ. ಅಕ್ಷರಸ್ಥ ಹವ್ಯಾಸ ಸಾಂಕ್ರಾಮಿಕ ರೋಗಶಸOಉಜ್ಞರು, ಸೋಂಕು ಮತ್ತು ಮರಣದ ಪ್ರಮಾಣದ ಬಗ್ಗೆ ಈಗ ಅತಿ ಸುಲಭವಾಗಿ ಮಾತನಾಡುತ್ತಿದ್ದಾರೆ.
ಮಾಸ್ಕ್, ಪಿಪಿಇ ಕಿಟ್ ಮತ್ತು ವೆಂಟಿಲೇಟರ್ ಬಗ್ಗೆಯೂ ಚರ್ಚೆ ಮಾಡುತ್ತಿದ್ದಾರೆ. ದೇಶದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಯಾವ ಹಂತದಲ್ಲಿದೆ ಎಂಬುದನ್ನು ಗಮನ ಹರಿಸಬೇಕಿದೆ ಎಂದರು. ಆನ್‌ಲೈನ್ ಮೂಲಕ ಮನೆಯಿಂದಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾಷಣ ನೀಡಿದರು. ವೈದ್ಯಕೀಯ, ದಂತವೈದ್ಯಕೀಯ, ಸ್ನಾತಕೋತ್ತರ, ಆಯು ರ್ವೇದ, ಹೋಮಿಯೋಪತಿ ಮುಂತಾದ ಕೋರ್ಸ್‌ಗಳಲ್ಲಿ 36,434 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಕಿದ್ವಾಯಿ ಗ್ರಂಥಿ ಸಂಸ್ಥೆಯ ಪ್ರಾಧ್ಯಾಪಕ ಡಾ.ಎಲ್. ಅಪ್ಪಾಜಿಯವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸ ಲಾಯಿತು. ಕುಲಪತಿಗಳಾದ ಡಾ.ಸಚ್ಚಿದಾನಂದ್ ಮುಂತಾದ ಗಣ್ಯರು ಸಮಾರಂಭದಲ್ಲಿದ್ದರು. ವರ್ಚುವಲ್ ಘಟಿಕೋತ್ಸವ: ಪಿಎಚ್.ಡಿ ಮತ್ತು ಚಿನ್ನದ ಪದಕ ವಿಜೇತರು ಮಾತ್ರ ಘಟಿಕೋತ್ಸವದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಉಳಿದ ಎಲ್ಲ ವಿದ್ಯಾರ್ಥಿಗಳು ವರ್ಚುವಲ್ ವ್ಯವಸ್ಥೆ ಮೂಲಕವೇ ಮನೆಯಿಂದಲೇ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ. 36434 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಚಿನ್ನದ ಪದಕ ವಿಜೇತರು: ಧಾರವಾಡದ ಎಸ್‌ಡಿಎಂ ದಂತವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪದವಿ ವಿದ್ಯಾರ್ಥಿನಿ ಡಾ.ರಶ್ಮಿತಾ.ಆರ್ ಅವರಿಗೆ 6 ಚಿನ್ನದ ಪದಕ, ಬೆಂಗಳೂರಿನ ಆಯುರ್ವೇದ ವಿಜ್ಞಾನ ಮತ್ತು ಸಂಶೋಧನಾ ಕಾಲೇಜಿನ ವಿದ್ಯಾರ್ಥಿನಿ ಡಾ.ಚಿಂದು ಬಿ.ಎಸ್ ಅವರಿಗೆ 5 ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ, ಧಾರವಾಡದ ಎಸ್‌ಡಿಎಂ ದಂತವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪದವಿ ವಿದ್ಯಾರ್ಥಿನಿ ಡಾ.ಪೂಜಾ ಎಸ್.ಹಿತ್ತಲಮನಿ ಹಾಗೂ ಬೆಂಗಳೂರಿನ ಪದ್ಮಶ್ರೀ ಪಿಸಿಯೋಥೆರಪಿ ಸಂಸ್ಥೆಯ ವಿದ್ಯಾರ್ಥಿ ಸಂಝಾನಾ ಖಡ್ಕ್ ಅವರಿಗೆ ತಲಾ 4 ವರ್ಣ ಪದಕವನ್ನು ಕುಲಪತಿಯವರು ವಿತರಿಸಿದರು.
ನಿರಂತರ ಪರಿಶ್ರಮಕ್ಕೆ ಫಲ ಸಿಕ್ಕಿದೆ. 4 ವರ್ಷವೂ ಕ್ಲಾಸಿಗೆ ಟಾಪರ್ ಆಗಿದ್ದೆ. ಆದರೆ ವಿವಿ ಹಂತದಲ್ಲಿ 6 ಚಿನ್ನದ ಪದಕ ಬರು ತ್ತದೆ ಅಂದುಕೊಂಡಿರಲಿಲ್ಲ. ಪರೀಕ್ಷೆ ಸಮಯ ದಲ್ಲಿ ದಿನಕ್ಕೆ 12 ಗಂಟೆ ಓದುತ್ತಿದ್ದೆ. ಪ್ರಾಧ್ಯಾಪಕರ ಹಾಗೂ ಪಾಲಕರ ಪ್ರೋತ್ಸಾಹವೂ ತುಂಬಾ ಚೆನ್ನಾಗಿತ್ತು. ರ್‍ಯಾಂಕ್ ಖುಷಿಕೊಟ್ಟಿದೆ.
-ಡಾ.ರಶ್ಮಿತಾ ಆರ್,6 ಚಿನ್ನ ಪದಕ ವಿಜೇತೆ