Advertisement
ಮಾಲೂರು ತಾಲೂಕಿನ ಮದನಹಳ್ಳಿ ಗ್ರಾಮದ ನಿವಾಸಿ ಅರುಣ್‌ಕುಮಾರ್ ಪತ್ನಿ ಸುಮಲತಾ ತವರಾದ ಬಂಗಾರಪೇಟೆ ತಾಲೂಕಿನ ಕೇತಗಾನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಹೆರಿಗೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಕೆಜಿಎಫ್ನ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯೆ ಡಾ.ಸುಧಾರಾಣಿ ಎಲ್ಲಾ ನಾರ್ಮಲ್ ಆಗಿದೆ ಎಂದು ತಿಳಿಸಿ ದಾಖಲಿಸಿಕೊಂಡಿದ್ದರು. ಬುಧವಾರ ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಾಗ ಸುಮಲತಾರಿಗೆ ವಿಪರೀತ ಹೊಟ್ಟೆನೋವಿನಿಂದ ನರಳಾಡಿದ್ದಾರೆ. ವೈದ್ಯರು ಪರೀಕ್ಷಿಸಿ ಮಗು ಹೊಟ್ಟೆಯಲ್ಲಿ ಕೊಳಚೆ ನೀರು ಕುಡಿದು ಬಿಟ್ಟಿದೆ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು 5.15ರ ವೇಳೆಗೆ ತಿಳಿಸಿದ್ದಾರೆ.
ಮೂರು ಗಂಟೆ ವಿಳಂಬ ಮಾಡಿದ ಕಾರಣದಿಂದ ಮಗು ಮೃತಪಟ್ಟಿದೆ. ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನಮಗೆ ನ್ಯಾಯ ಸಿಗಬೇಕು ಎಂದು ಆಸ್ಪತ್ರೆ ಮುಂಭಾಗ ಹೋರಾಟ ಪ್ರತಿಭಟನೆ ಮಾಡಿದರು. ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಲಂಚಕ್ಕಾಗಿ ಪೀಡಿಸುತ್ತಾರೆ. ಹಣಕೊಟ್ಟರೆ ರೋಗಿಗಳನ್ನ ಚೆನ್ನಾಗಿ ನೋಡುತ್ತಾರೆ. ನಮ್ಮಿಂದ ಸಹ 50 ಸಾವಿರ ಲಂಚ ಕೇಳಿದರು ನೀಡದಿದ್ದಕ್ಕೆ ಮಗು ಕಳೆದು ಕೊಳ್ಳುವಂತಾಗಿದೆ ಎಂದು ವೈದ್ಯರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement