Advertisement
ಅನುದಾನಿತ ಕನ್ನಡ ಶಾಲೆಯನ್ನು ಸರಕಾರಿ ಶಾಲೆಯನ್ನಾಗಿ ಪರಿವರ್ತಿಸಿ ಶಿಕ್ಷಕರನ್ನು ನೇಮಿಸುವಂತೆ ಕಳೆದ 2 ವರ್ಷಗಳಿಂದ ಶಾಲೆಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ನಿರಂತರ ಮನವಿ ಮಾಡುತ್ತಾ ಬಂದರೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯತೋರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಪಂ. ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ವಹಿಸಿ, ಗ್ರಾಮದಲ್ಲಿ ಪಂಚ ಸೇತುವೆ, ಕಿಂಡಿ ಅಣೆಕಟ್ಟು, ಪ್ರಮುಖ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಜನತೆಯ ಮೂಲ ಬೇಡಿಕೆಗಳನ್ನು ದಾಖಲೆಯ ಪ್ರಮಾಣದಲ್ಲಿ ಈಡೇರಿಸಲಾಗಿದ್ದು ಮಾದರಿ ಪಂ.ಆಗಿ ನಿರ್ಮಿಸಲಾಗಿದೆ ಎಂದರು.
ದೊಂಡೇರಂಗಡಿ ಪ್ರಾ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಂದ್ರಿಕಾ ಕಿಣಿ ಮಾತನಾಡಿ ಪಂ.ವ್ಯಾಪ್ತಿಯಲ್ಲಿ ಕೋತಿ ಶವ ಪತ್ತೆಯಾಗಿದ್ದರೂ ಮಂಗನ ಕಾಯಿಲೆಯ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಗ್ರಾಮಸ್ಥರು ಈ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಆದರೂ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದರು.
ದಬುìಜೆ, ಮೂಡಬೆಟ್ಟು, ಗರಡಿ ರಸ್ತೆ ಅಭಿವೃದ್ದಿಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.ತಾ.ಪಂ. ಸದಸ್ಯರಾದ ಸುಲತಾ ನಾಯ್ಕ, ಗ್ರಾ.ಪಂ. ಸದಸ್ಯರಾದ ಸತೀಶ್ ಪೂಜಾರಿ, ಸುಕೇಶ್ ಹೆಗ್ಡೆ, ಜಯಂತಿ, ಸುಮಿತ್ರ, ಹರೀಶ್, ಅಶೋಕ್, ಸುಧೀರ್, ಲಲಿತಾ, ರತ್ನಾವತಿ, ಗ್ರಾಮ ಕರಣಿಕರಾದ ಪ್ರಶಾಂತ್, ಅರಣ್ಯ ಇಲಾಖೆಯ ಅಧಿಕಾರಿ ಶೋಭಾ ಉಪ್ಪಾರ್ ಉಪಸ್ಥಿತರಿದ್ದರು.
ಪಿಡಿಒ ಫರ್ಜಾನಾ ಎಂ. ಆರ್ಥಿಕ ವರ್ಷದ ವರದಿ ಮಂಡಿಸಿ ತೆರಿಗೆ ಹಾಗೂ ನೀರಿನ ಬಿಲ್ಲು ಪಾವತಿಸಲು ಮನವಿ ಮಾಡಿದರು. ಬೇಸಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸುವುದರಿಂದ ಮಿತವಾಗಿ ನೀರು ಬಳಕೆ ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಅರಣ್ಯಾ, ಕಂದಾಯ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಮಸ್ಥರ ಪರವಾಗಿ ದೇವೇಂದ್ರ ಕಾಮತ್, ದಯಾನಂದ ಹೆಗ್ಡೆ ಮಾತನಾಡಿದರು.
ಸಭೆಯಲ್ಲಿ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. ಪಿಡಿಒ ಫರ್ಜಾನ ಎಂ. ಸ್ವಾಗತಿಸಿ, ವಂದಿಸಿದರು.