Advertisement

343 ಪರೀಕ್ಷೆ ವರದಿ ನೆಗೆಟಿವ್

06:37 PM May 01, 2020 | Suhan S |

ಹಾವೇರಿ: ಉಸಿರಾಟ ತೊಂದರೆ, ನೆಗಡಿ, ಕಫದಿಂದ ಬಳಲುತ್ತಿದ್ದ 343 ಜನರ ರಕ್ತ ಮತ್ತು ಗಂಟಲು ಮಾದರಿ ಪರೀಕ್ಷೆ ವರದಿ ನೆಗೆಟಿವ್‌ ಬಂದಿದ್ದು ಗುರುವಾರ ಮತ್ತೆ 145 ಜನರ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

Advertisement

ಈವರೆಗೆ ಒಟ್ಟು 1744 ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 1567 ಮಾದರಿಗಳು ನೆಗೆಟಿವ್‌ ಬಂದಿವೆ. ಉಳಿದ ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ. ಈವರೆಗೆ ಕ್ವಾರಂಟೈನ್‌ ಮಾಡಲಾಗಿದ್ದ ಎಲ್ಲ 219 ಜನರ ಕ್ವಾರಂಟೈನ್‌ ಅವಧಿ ಪೂರ್ಣಗೊಂಡಿದೆ. ಶಂಕಿತ ಕೋವಿಡ್ 19 ಲಕ್ಷಣಗಳ ಆಧಾರದ ಮೇಲೆ ಸರ್ಕಾರಿ ಕ್ವಾರಂಟೈನ್‌ ನಲ್ಲಿ ನಾಲ್ಕು ಜನರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next