ಗುಂಡ್ಲುಪೇಟೆ: ಈಗಾಗಲೇ ಗುಂಡ್ಲುಪೇಟೆ ಡಿಪೋದಿಂದ ಕೇರಳಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆ ಕೇರಳ ಬಸ್‌ನಲ್ಲಿ
ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ರಾಜ್ಯಕ್ಕೆ ಬರುವ ಪ್ರಯಾಣಿಕರೂ ಕೋವಿಡ್ ಆರ್‌ಟಿಪಿಸಿಆರ್ ವರದಿ ಕಡ್ಡಾಯವಾಗಿ ಹೊಂದಿರಲೇಬೇಕು ಎಂದು ತಹಶೀಲ್ದಾರ್ ಸಿ.ಜೆ.ರವಿಶಂಕರ್ ತಿಳಿಸಿದರು.
ತಾಲೂಕಿನ ಗಡಿಭಾಗ ಮೂಲೆಹೊಳೆ ಚೆಕ್ ಪೋಸ್ಟ್‌ಗೆ ಭೇಟಿ ಕೋವಿಡ್ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಮಾತನಾಡಿದರು. ಜನತೆ 3ನೇ ಅಲೆ ಭೀತಿಯಲ್ಲಿದ್ದಾರೆ. ಇದನ್ನು ದೂರ ಮಾಡುವುದು ಪ್ರತಿಯೊಬ್ಬ ಅಧಿಕಾರಿ ಹಾಗೂ ತಾಲೂಕು ಆಡಳಿತದ ಜವಾಬ್ದಾರಿ ಆಗಿರುವುದರಿಂದ ಗಡಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳ ತಂಡ ಕಟ್ಟುನಿಟ್ಟಿನಿಂದ ತಪಾಸಣೆ ನಡೆಸಬೇಕು ಎಂದರು.
ಇದನ್ನೂ ಓದಿ:ಕಾಡು ಹಂದಿಗೆ ಇಟ್ಟ ಉರುಳಿಗೆ ಬಿತ್ತು ಬೃಹತ್ ಗಾತ್ರದ ಚಿರತೆ
ಚೆಕ್ ಪೋಸ್ಟ್‌ನಲ್ಲಿ ಆರ್‌ಟಿಪಿಸಿಆರ್ ಕಡ್ಡಾಯ ನಾಮಫಲಕ ಹಾಕಿರುವ ಹಿನ್ನೆಲೆ ಸರಕು ಸಾಗಣೆ ವಾಹನ ಸವಾರರು 72 ಗಂಟೆ ಆರ್‌ಟಿಪಿಸಿಆರ್ ವರದಿ ನೀಡಿ ಸಂಚರಿಸುತ್ತಿದ್ದಾರೆ.
ಸ್ವಂತ ವಾಹನಗಳಲ್ಲಿ ಬರುವ ಪ್ರಯಾಣಿಕರು ವರದಿ ಇಲ್ಲದ ಕಾರಣ ತಪಾಸಣೆ ನಡೆಸಿ ವಾಪಸ್ ಕಳುಹಿಸಲಾಗುತ್ತಿದೆ. ಉಳಿದಂತೆ ಮಾರುಕಟ್ಟೆಗೆ ಬರುವ ವಾಹನ ಎಂದಿನಂತೆ ಸಂಚಾರ ಮಾಡುತ್ತಿವೆ ಎಂದು ತಿಳಿಸಿದರು. ಚೆಕ್ ಪೋಸ್ಟ್ ನೋಡೆಲ್ ಅಧಿಕಾರಿ ರಾಜು, ಸಬ್ ಇನ್ಸ್‌ಪೆಕ್ಟರ್ ಲೋಕೇಶ್, ಆರೋಗ್ಯ, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.