Advertisement

Communistಗಳ ನಕಾರಾತ್ಮಕ ಸಿದ್ಧಾಂತ ಹತ್ಯಾಕಾಂಡಗಳಿಗೆ ಕಾರಣ: ಡಾ.ಎಸ್.ಆರ್.ಲೀಲಾ

04:12 PM Jun 17, 2023 | Team Udayavani |

ಪಣಜಿ: ಸಾಮ್ಯವಾದಿಗಳ ನಕಾರಾತ್ಮಕ ಸಿದ್ಧಾಂತದ ಪ್ರಭಾವದಿಂದ ದೇಶದಲ್ಲಿ ಹತ್ಯಾಕಾಂಡಗಳಾದವು ಎಂದು ಮಾಜಿ ಶಾಸಕಿ ಹಾಗೂ ಲೇಖಕಿ ಡಾ. ಎಸ್.ಆರ್. ಲೀಲಾ ಹೇಳಿದ್ದಾರೆ.

Advertisement

ಗೋವಾದ ಶ್ರೀ ರಾಮನಾಥಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡಿದ ಅವರು, ಕಾರ್ಲ್ ಮಾರ್ಕ್ಸ್ ನ ಕಮ್ಯುನಿಸ್ಟ್ ಮೆನಿಫೆಸ್ಟೊದ ವಿಚಾರಗಳಿಗೆ ಬಲಿಯಾದ ಜನರು ಭಾರತಕ್ಕೆ ಸಾಮ್ಯವಾದ ತಂದರು. ಸಾಮ್ಯವಾದಿ ಸಿದ್ಧಾಂತವು ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಕರವಾಗಿದೆ. 1980 ರ ದಶಕದಲ್ಲಿ ಅನೇಕ ದೇಶಗಳಲ್ಲಿ ಸಾಮ್ಯವಾದ ಅಂತ್ಯ ಕಂಡಿತು. ರಷ್ಯಾದಲ್ಲಿ ಸಾಮ್ಯವಾದ ಕೂಡ ಕೊನೆಗೊಂಡಿತು. ಚೀನಾವು ಸಾಮ್ಯವಾದವನ್ನಾಧರಿಸಿ ರಾಜ್ಯಪದ್ಧತಿ ಮುಂದುವರಿಸಿದ್ದರೂ ಅದು ತನ್ನ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿದೆ ಎಂದರು.

ಸಾಮ್ಯವಾದಿ ಸಿದ್ಧಾಂತವು ಭಾರತೀಯ ಆಚಾರ-ವಿಚಾರಗಳ ವಿರುದ್ಧವಾಗಿದೆ. ಭಾರತದ ಸಾಮ್ಯವಾದಿಗಳು ಭಾರತೀಯ ಸಂಸ್ಕೃತಿಯ ಶತ್ರುಗಳಾಗಿದ್ದಾರೆ. ಸಾಮ್ಯವಾದಿಗಳು ಮುಸ್ಲಿಮರನ್ನು ಬಳಸಿ ಹಿಂದೂಗಳ ಮಾರಣಹೋಮ ನಡೆಸಿದರು. ಅವರು ಭಾರತೀಯ ಸಂಸ್ಕೃತಿಯನ್ನೇ ನಾಶ ಮಾಡಲು ಯತ್ನಿಸಿದರು. ಡಾ. ಅಂಬೇಡ್ಕರ್ ಅವರು, ಸಾಮ್ಯವಾದವು ಕಾಡ್ಗಿಚ್ಚಿನಂತೆ ಎಂದು ಹೇಳಿದ್ದರು. ಡಾ. ಅಂಬೇಡ್ಕರ್ ನಿಜವಾದ ರಾಷ್ಟ್ರೀಯವಾದಿಯಾಗಿದ್ದರು. ಅವರು ಮೊಟ್ಟಮೊದಲು ಹಿಂದೂ ರಾಷ್ಟ್ರದ ಕಲ್ಪನೆಯನ್ನು ಪ್ರಸ್ತಾಪಿಸಿದ್ದರು ಎಂದರು.

ಮುಸ್ಲಿಮರು ಹುಟ್ಟಿನಿಂದಲೇ ತುಂಬಾ ಆಕ್ರಮಣಕಾರಿಯಾಗಿದ್ದಾರೆ. ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಬರಲು ಅಸಾಧ್ಯ. ಭಾರತವನ್ನು ವಿಭಜಿಸಬೇಕಾದರೆ, 100 ರಷ್ಟು ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಮತ್ತು ಹಿಂದುಸ್ಥಾನವು ಹಿಂದೂಗಳಿಗಾಗಿ ಉಳಿಯಲಿ, ಎಂದು ಡಾ. ಅಂಬೇಡಕರ ಮಂಡಿಸಿದ್ದರು. ನಮ್ಮನ್ನು ಸದ್ಭಾವನೆಯಿಂದ ನಡೆಸಿಕೊಳ್ಳುವವರನ್ನು ಮಾತ್ರ ನಾವು ಸದ್ಭಾವನೆಯಿಂದ ನಡೆಸಿಕೊಳ್ಳಬೇಕು. ದುಷ್ಟ ರೀತಿಯಲ್ಲಿ ವರ್ತಿಸುವವರಿಂದ ಸಜ್ಜನರನ್ನು ರಕ್ಷಿಸಬೇಕು ಎಂದು ರಾಮಾಯಣದ ಬೋಧನೆಯಾಗಿದೆ ಎಂದರು.

ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ನೂರಾರು ಹಿಂದುತ್ವನಿಷ್ಠರು ಭಾಗಿಯಾಗಿದ್ದು ಕರ್ನಾಟಕದ ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀ. ಸಂತೋಷ್ ಕೆಂಚಾಂಬ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next