Advertisement

ನೀತು ಈಗ ವಜ್ರಮುಖೀ

11:18 AM Apr 30, 2017 | |

ನೀತು ಈಗ ಒಂದಷ್ಟು ವಿಭಿನ್ನ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಕೇವಲ ನಾಯಕಿ ಪ್ರಧಾನ ಪಾತ್ರದಲ್ಲೇ ಕಾಣಿಸಿಕೊಳ್ಳುವ ಬದಲು ಕಥೆಯ ಜೊತೆ ಜೊತೆಗೆ ಸಾಗುವ ಹೊಸ ಬಗೆಯ ಪಾತ್ರಗಳತ್ತ ನೀತು ಗಮನಹರಿಸುತ್ತಿದ್ದಾರೆ. ಅದರ ಫ‌ಲವಾಗಿ ಈಗಾಗಲೇ ನೀತು ಒಂದಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ.

Advertisement

“1888′ ಎಂಬ ಸಿನಿಮಾದಲ್ಲಿ ಸಂಧ್ಯಾ ಶೆಟ್ಟಿ ಎಂಬ ರಾಜಕಾರಣಿಯ ಪಾತ್ರ ಮಾಡಿದರೆ, “ಮೊಂಬತ್ತಿ’ಯಲ್ಲಿ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಇಂತಿಪ್ಪ ನೀತು ಈಗ ಹಾರರ್‌ ಸಿನಿಮಾವೊಂದರಲ್ಲಿ ಭಯಂಕರವಾಗಿ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ರೆಡಿಯಾಗಿದ್ದಾರೆ. ಅದು “ವಜ್ರಮುಖೀ’. ಇದು ಪಕ್ಕಾ ಹಾರರ್‌ ಸಿನಿಮಾ. ಈ ಚಿತ್ರದಲ್ಲಿ ನೀತು ವಜ್ರಮುಖೀ ಪಾತ್ರ ಮಾಡುತ್ತಿದ್ದಾರೆ. ಹಾಗಾಗಿ ಅವರ ಗೆಟಪ್‌ ಕೂಡಾ ಭಿನ್ನವಾಗಿದೆ. 

ಈಗಾಗಲೇ ಶಿವಮೊಗ್ಗ ಸುತ್ತಮುತ್ತ ಶೇ 50 ರಷ್ಟು ಚಿತ್ರೀಕರಣವಾಗಿದ್ದು, ಮೇಯಿಂದ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಶಶಿಕುಮಾರ್‌ ಈ ಚಿತ್ರದ ನಿರ್ಮಾಪಕರು. ಈ ಹಿಂದೆ ಇವರು “ಶ್ರೀ ಸಿಗಂದೂರು ಚೌಡೇಶ್ವರಿ’ ಎಂಬ ಸಿನಿಮಾ ನಿರ್ಮಿಸಿದ್ದರು. ಈಗ “ವಜ್ರಮುಖೀ’ ಎಂಬ ಹಾರರ್‌ ಸಿನಿಮಾ ಮಾಡುತ್ತಿದ್ದಾರೆ. ಕೃಷ್ಣ ಕುಮಾರ್‌ ಈ ಚಿತ್ರದ ನಿರ್ದೇಶಕರು. ಮೊದಲ ಬಾರಿಗೆ ಹಾರರ್‌ ಸಿನಿಮಾ ಮಾಡುತ್ತಿರುವ ನೀತು ಖುಷಿಯಾಗಿದ್ದಾರೆ.

“ಇತ್ತೀಚೆಗೆ ಒಂದಷ್ಟು ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಅದರಲ್ಲಿ “ವಜ್ರಮುಖೀ’ ಕೂಡಾ ಒಂದು. ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ನಾನಿಲ್ಲಿ ಟೈಟಲ್‌ ರೋಲ್‌ ಮಾಡುತ್ತಿದ್ದೇನೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಮುಂದೆಯೂ ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟ ಸಿನಿಮಾಗಳನ್ನು ಮಾಡಬೇಕೆಂಬ ಆಸೆ ನೀತು ಅವರಿಗಿದೆಯಂತೆ. “ವಜ್ರಮುಖೀ’ ಚಿತ್ರಕ್ಕೆ ಪಿ.ಕೆ.ಎಚ್‌ ದಾಸ್‌ ಛಾಯಾಗ್ರಹಣ, ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next