Advertisement

Hall of Fame: ಬೌಲಿಂಗ್‌ ತಾರೆ ನೀತು ಡೇವಿಡ್‌ಗೆ ಹಾಲ್‌ ಆಫ್ ಫೇಮ್‌ ಗೌರವ

10:53 PM Oct 16, 2024 | Team Udayavani |

ಹೊಸದಿಲ್ಲಿ: 2024ರ ಸಾಲಿನ ಪ್ರತಿಷ್ಠಿತ ಐಸಿಸಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿಗೆ ಭಾರತದ ಬೌಲಿಂಗ್‌ ದಂತಕತೆ ನೀತು ಡೇವಿಡ್‌, ಇಂಗ್ಲೆಂಡ್‌ನ‌ ಅಲಿಸ್ಟರ್‌ ಕುಕ್‌ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ಇದರೊಂದಿಗೆ ಡಯಾನಾ ಎಡುಲ್ಜಿ ಬಳಿಕ ಈ ಗೌರವಕ್ಕೆ ಪಾತ್ರವಾದ ಭಾರತದ ಆಟಗಾರ್ತಿಯಾಗಿ ನೀತು ಡೇವಿಡ್‌ ಗುರುತಿಸಿಕೊಂಡಿದ್ದಾರೆ.

Advertisement

47 ವರ್ಷದ ಮಾಜಿ ಸ್ಪಿನ್ನರ್‌ ನೀತು ಡೇವಿಡ್‌, ಭಾರತ ಪರ 10 ಟೆಸ್ಟ್‌ ಮತ್ತು 97 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 41, ಏಕದಿನದಲ್ಲಿ 141 ವಿಕೆಟ್‌ ಉರುಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಉರುಳಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್‌ ಎನ್ನುವ ಸಾಧನೆಯೂ ಇವರದ್ದಾಗಿದೆ. ಸದ್ಯ ನೀತು ಡೇವಿಡ್‌ ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next