Advertisement

UPSC ಪರೀಕ್ಷೆಗೆ ಇನ್ನು ಹೊಸ ಸ್ವರೂಪ! ಆಧುನಿಕ ತಂತ್ರಜ್ಞಾನದ ಮೂಲಕ ಅಕ್ರಮಕ್ಕೆ ತಡೆ

01:12 AM Jul 26, 2024 | Team Udayavani |

ಹೊಸದಿಲ್ಲಿ: ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ವಿವಾದದ ಬೆನ್ನಲ್ಲೇ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ತಾನು ನಡೆಸುವ ಪರೀಕ್ಷಾ ವ್ಯವಸ್ಥೆಯನ್ನು ಪುನರ್‌ ಪರಿಶೀಲಿಸಲು ಮುಂದಾಗಿದೆ.

Advertisement

ಪರೀಕ್ಷೆ ಬರೆಯುವವರು ನೈಜ ಅಭ್ಯರ್ಥಿ ಗಳೇ ಎಂದು ಖಚಿತಪಡಿಸಿಕೊಳ್ಳಲು ಆಧಾರ್‌ ಆಧಾರಿತ ಫಿಂಗರ್‌ ಪ್ರಿಂಟ್‌ ದೃಢೀಕರಣ, ಅಭ್ಯರ್ಥಿಗಳ ಮುಖಚಹರೆ ಗುರುತು, ಪರೀಕ್ಷಾ ಕೇಂದ್ರಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ (ಎಐ) ಸಿಸಿಟಿವಿ ಸರ್ವೇಕ್ಷಣೆ ಮತ್ತಿತರ ಸುಧಾರಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ನಾಗರಿಕ ಸೇವಾ ಪರೀಕ್ಷೆ ಮತ್ತು ಇತರ ಪರೀಕ್ಷೆಗಳಿಗಾಗಿ ತಾಂತ್ರಿಕ ಸೇವೆಯನ್ನು ಪಡೆಯುವುದಕ್ಕಾಗಿ ಸಾರ್ವಜನಿಕ ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿದೆ. ಬಿಡ್‌ ಗೆಲ್ಲುವ ಕಂಪೆನಿಗಳು ದೇಶಾದ್ಯಂತ ಯುಪಿಎಸ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ಕಲರ್‌ ಕೆಮರಾ
ಗಳನ್ನು ಅಳವಡಿಸಬೇಕಾಗುತ್ತದೆ.

ಪರೀಕ್ಷಾ ಕೇಂದ್ರಗಳಲ್ಲಿ ಕ್ಯುಆರ್‌ ಕೋಡ್‌ ಆಧಾರಿತ ದೃಢೀಕರಣ ವ್ಯವಸ್ಥೆಯೂ ಜಾರಿಗೆ ಬರಲಿದೆ. ಯುಪಿಎಸ್‌ಸಿ ಪರೀಕ್ಷಾ ಸಂಸ್ಥೆಗೆ ನೀಡಿರುವ ಮಾಹಿತಿ ಮತ್ತು ಅಭ್ಯರ್ಥಿಯ ಬಳಿ ಇರುವ ಅಡ್ಮಿಟ್‌ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ದೃಢೀಕರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next