Advertisement

NEET-UG ಪರಿಷ್ಕೃತ ಫ‌ಲಿತಾಂಶ: ಟಾಪರ್‌ ಕೂಡ ಬದಲು!

12:36 AM Jul 28, 2024 | Team Udayavani |

ಹೊಸದಿಲ್ಲಿ: ಶುಕ್ರವಾರ ಪ್ರಕಟವಾದ ನೀಟ್‌-ಯುಜಿ ಪರಿಷ್ಕೃತ ಫ‌ಲಿತಾಂಶ ಅಚ್ಚರಿಗೆ ಕಾರಣವಾಗಿದೆ. ಟಾಪರ್ಸ್‌ ಸಂಖ್ಯೆ 61ರಿಂದ 17ಕ್ಕೆ ಇಳಿದಿದ್ದಲ್ಲದೇ, ಟಾಪರ್‌ ಸಹ ಬದಲಾಗಿದ್ದಾರೆ.

Advertisement

ಈ ಮೊದಲು ಪ್ರಕಟವಾಗಿದ್ದ ಫ‌ಲಿತಾಂಶದಲ್ಲಿ ಮಹಾರಾಷ್ಟ್ರದ ವೇದ್‌ ಎಸ್‌.ಶೆಂದೆ ಅಖೀಲ ಭಾರತ ಮಟ್ಟದಲ್ಲಿ ಟಾಪರ್‌ ಆಗಿದ್ದರು. ಆದರೆ ಪರಿಷ್ಕೃತ ಫ‌ಲಿತಾಂಶದಲ್ಲಿ ಆ ಸ್ಥಾನವನ್ನು ದಿಲ್ಲಿಯ ಒಬಿಸಿ-ಎನ್‌ಸಿಎಲ್‌(ನಾನ್‌ ಕ್ರೀಮಿ ಲೇಯರ್‌) ಕೆಟಗರಿಯ ಮೃದುಲ್‌ ಆನಂದ್‌ ಪಡೆದುಕೊಂಡಿದ್ದಾರೆ. ಜತೆಗೆ ಶೆಂದೆ ಈಗ 25ನೇ ರ್‍ಯಾಂಕ್‌ಗೆ ಕುಸಿದಿದ್ದಾರೆ. ಅವರ ಅಂಕವೂ ಈಗ 715ಕ್ಕೆ ಇಳಿದಿದೆ.

ಪರಿಷ್ಕೃತ ಫ‌ಲಿತಾಂಶದಲ್ಲಿ 17 ಜನರು 720 ಪೂರ್ಣಾಂಕ ಪಡೆದುಕೊಂಡರೆ, 6 ಮಂದಿ 716 ಅಂಕ ಪಡೆದಿದ್ದಾರೆ. ಪೂರ್ಣಾಂಕ ಪಡೆದ 17 ಜನರ ಪೈಕಿ ಅತೀ ಹೆಚ್ಚು ಅಂದರೆ 4 ಮಂದಿ ರಾಜಸ್ಥಾನ, 4 ಮಂದಿ ಮಹಾರಾಷ್ಟ್ರಕ್ಕೆ ಸೇರಿದ್ದಾರೆ. ದಿಲ್ಲಿ, ಉ.ಪ್ರ.ದಿಂದ ಇಬ್ಬರು ಮತ್ತು ಬಿಹಾರ, ಪಂಜಾಬ್‌, ಪ.ಬಂಗಾಲ, ತಮಿಳುನಾಡು, ಕೇರಳ, ಚಂಡೀಗಢದಿಂದ ತಲಾ ಒಬ್ಬೊಬ್ಬರಿದ್ದಾರೆ. ಪ್ರಸಕ್ತ ವರ್ಷ ಎನ್‌ಟಿಎ ಬಿಡುಗಡೆ ಮಾಡಿದ ನೀಟ್‌-ಯುಜಿಯ 4ನೇ ಪರಿಷ್ಕೃತ ಫ‌ಲಿತಾಂಶ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next