Advertisement

NEET UG ಫ‌ಲಿತಾಂಶ: ಧ್ರುವ್‌ ರಾಜ್ಯಕ್ಕೆ ಪ್ರಥಮ

11:52 PM Jun 13, 2023 | Team Udayavani |

ಹೊಸದಿಲ್ಲಿ /  ಮಂಗಳೂರು: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ನೀಟ್‌-ಯುಜಿ ಪರೀಕ್ಷೆಯ ಫ‌ಲಿತಾಂಶವು ಮಂಗಳವಾರ ಪ್ರಕಟವಾಗಿದೆ. ಧ್ರುವ್‌ ಆಡ್ವಾಣಿ 5ನೇ ರ್‍ಯಾಂಕ್‌ ಪಡೆದು ರಾಜ್ಯಕ್ಕೆ  ಪ್ರಥಮ ಸ್ಥಾನಿಯಾಗಿದ್ದಾರೆ. ಮಂಗಳೂರು ಎಕ್ಸ್‌ಪರ್ಟ್‌ ಕಾಲೇಜಿನ ಬೈರೇಶ್‌ ಎಸ್‌.ಎಚ್‌. 710 ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ  48ನೇ ರ್‍ಯಾಂಕ್‌ ಗಳಿಸಿದ್ದು, ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ.

Advertisement

ತಮಿಳುನಾಡಿನ ಪ್ರಭಂಜನ್‌ ಜೆ. ಮತ್ತು ಆಂಧ್ರದ ಬೋರಾ ವರುಣ್‌ ಚಕ್ರವರ್ತಿ ಶೇ. 99.99 ಅಂಕಗಳನ್ನು ಗಳಿಸಿ ದೇಶಕ್ಕೆ ಪ್ರಥಮರಾಗಿ ಹೊರಹೊಮ್ಮಿದ್ದಾರೆ. ಪರೀಕ್ಷೆ ಬರೆದಿದ್ದ 20.38 ಲಕ್ಷ ಅಭ್ಯರ್ಥಿಗಳ ಪೈಕಿ 11.45 ಲಕ್ಷ ಮಂದಿ ತೇರ್ಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next