ನವದೆಹಲಿ: ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ ಹಜಾರಿಬಾಗ್ ಕಾಲೇಜಿನ ಪ್ರಾಂಶುಪಾಲ ಹಾಗೂ ಉಪ ಪ್ರಾಂಶುಪಾಲರನ್ನು ಸಿಬಿಐ ಬಂಧಿಸಿದೆ.
ಇದನ್ನೂ ಓದಿ:Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?
ಎನ್ ಟಿಎ (National Testing Agency) ನಡೆಸಿದ್ದ ನೀಟ್ ಪರೀಕ್ಷೆಯಲ್ಲಿ ಓಯಸಿಸ್ ಕಾಲೇಜಿನ ಪ್ರಾಂಶುಪಾಲ ಎಹ್ಸಾನುಲ್ ಹಖ್, ಮೇ 5ರಂದು ನಡೆದ ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ ನಗರದ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.
ಉಪ ಪ್ರಾಂಶುಪಾಲ ಇಮ್ತಿಯಾಜ್ ಅಲಂ ಓಯಸಿಸ್ ಕಾಲೇಜಿನ ಕೇಂದ್ರ ಸಂಯೋಜಕರಾಗಿ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವೀಕ್ಷಕರನ್ನಾಗಿ ನೇಮಿಸಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇಬ್ಬರನ್ನೂ ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ಬಿಹಾರ ಪೊಲೀಸ್ ಎಕಾನಾಮಿಕ್ ಅಫೆನ್ಸ್ ಸ್ (EoU) ಇಬ್ಬರನ್ನೂ ವಿಚಾರಣೆಗೊಳಪಡಿಸಿತ್ತು.
ನಟೋರಿಯಸ್ ಸಂಜೀವ್ ಕುಮಾರ್ ಅಲಿಯಾಸ್ ಲುಟಾನ್ ಮುಖಿಯಾ ಗ್ಯಾಂಗ್ ಹಜಾರಿಬಾಗ್ ನ ಓಯಸಿಸ್ ಕಾಲೇಜಿನಲ್ಲಿ ನೀಟ್ ಯುಜಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರುವುದಾಗಿ ಬಿಹಾರ ಪೊಲೀಸರು ನೀಡಿದ ಪ್ರಕಟನೆಯಲ್ಲಿ ತಿಳಿಸಿದ್ದರು.