Advertisement
ಆ.14ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಅಖೀಲ ಭಾರತ ಕೋಟಾ ಅಡಿಯಲ್ಲಿ ವಿದ್ಯಾರ್ಥಿಗಳು ಶೇ.15ರಷ್ಟು ಸೀಟುಗಳನ್ನು ಪಡೆದುಕೊಳ್ಳಲಿದ್ದಾರೆ. 3 ಹಂತಗಳಲ್ಲಿ ನೀಟ್ ಯುಜಿ ಕೌನ್ಸೆಲಿಂಗ್ ನಡೆಯಲಿದೆ. ಆ.14ರಿಂದ 16ರವರೆಗೆ ಸೀಟ್ ಮ್ಯಾಟ್ರಿಕ್ಸ್‌ನ ತಾಳೆ ನೋಡುವಿಕೆ ಆರಂಭವಾಗಲಿದೆ. ಆ.14ರಿಂದ 21ರವರೆಗೆ ನೋಂದಣಿ ಹಾಗೂ ಶುಲ್ಕ ಪಾವತಿಗೆ ಅವಕಾಶ ನೀಡಲಾಗಿದ್ದು, ಆ.21ರ ಮಧ್ಯಾಹ್ನ 3 ಗಂಟೆವರೆಗೆ ಶುಲ್ಕ ಪಾವತಿಸಬಹುದಾಗಿದೆ. ಆ.21ರಂದು ಸೀಟು ಹಂಚಿಕೆ ನಡೆಯಲಿದ್ದು, ಆ.23ರಂದು ಫಲಿತಾಂಶ ಪ್ರಕಟವಾಗಲಿದೆ. Advertisement
NEET UG ಕೌನ್ಸೆಲಿಂಗ್ ದಿನಾಂಕ ಘೋಷಣೆ: ಆ.14ರಿಂದ ನೋಂದಣಿ ಆರಂಭ!
09:55 PM Jul 30, 2024 | |