Advertisement

ನೀಟ್‌-ಪಿಜಿ ಮುಂದಕ್ಕೆ

12:49 AM May 04, 2021 | Team Udayavani |

ಹೊಸದಿಲ್ಲಿ: ನೀಟ್‌-ಪಿಜಿ ಪ್ರವೇಶ ಪರೀಕ್ಷೆ ಮುಂದೂಡಿಕೆ, ಮೆಡಿಕಲ್‌ ಇಂಟರ್ನ್ಗಳು ಮತ್ತು ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನೂ ಸೇವೆಗೆ ನಿಯೋಜನೆ, 100 ದಿನಗಳ ಸೇವೆ ಸಲ್ಲಿಸುವ ಈ ಯುವ ವೈದ್ಯರಿಗೆ ಸರಕಾರದ ನೇಮಕಾತಿಯಲ್ಲಿ ಆದ್ಯತೆ, ಪ್ರಧಾನಮಂತ್ರಿಯವರ ಕೋವಿಡ್‌ ರಾಷ್ಟ್ರೀಯ ಸೇವಾ ಸಮ್ಮಾನದ ಗೌರವ…

Advertisement

– ಕೋವಿಡ್ ವಿರುದ್ಧದ ಹೋರಾಟಕ್ಕೆ ಸಾಕಷ್ಟು ವೈದ್ಯರು ಲಭ್ಯವಾಗುವಂತೆ ಮಾಡಲು ಪ್ರಧಾನಿ ಮೋದಿ ಕೈಗೊಂಡಿರುವ ಕ್ರಮಗಳಿವು.

ಈಗಾಗಲೇ ಹಾಸಿಗೆ ಗಳ ಕೊರತೆ, ಆಮ್ಲಜನಕ ಅಭಾವ ಎದುರಿಸುತ್ತಿರುವ ಆಸ್ಪತ್ರೆಗಳಿಗೆ ಸದ್ಯದಲ್ಲೇ ಮಾನವ ಸಂಪನ್ಮೂಲಗಳ ಕೊರತೆಯೂ ಎದು ರಾಗ ಲಿದೆ ಎಂದು ತಜ್ಞರು ಎಚ್ಚರಿಸಿದ ಬೆನ್ನಲ್ಲೇ ಸರಕಾರವು ಈ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಪರೀಕ್ಷೆ  4 ತಿಂಗಳು ಮುಂದೂಡಿಕೆ :

ಹೆಚ್ಚಿನ ವೈದ್ಯ ವಿದ್ಯಾರ್ಥಿಗಳನ್ನು ಸೇವೆಗೆ ಲಭ್ಯ ವಾಗಿಸಲು ಸರಕಾರ ನೀಟ್‌-ಪಿಜಿ ಪರೀಕ್ಷೆಯನ್ನು ನಾಲ್ಕು ತಿಂಗಳ ಕಾಲ ಮುಂದೂಡಿದೆ. ಆಗಸ್ಟ್‌  31ರ ವರೆಗೂ ಪರೀಕ್ಷೆ ನಡೆಯುವುದಿಲ್ಲ. ಪರೀಕ್ಷೆ ದಿನಾಂಕ ಘೋಷಣೆಯ ಬಳಿಕ ವಿದ್ಯಾರ್ಥಿಗಳಿಗೆ ಕನಿಷ್ಠ 1 ತಿಂಗಳ ಕಾಲಾವಕಾಶ ನೀಡಲಾಗುತ್ತದೆ ಎಂದೂ ತಿಳಿಸಲಾಗಿದೆ.

Advertisement

ಏನೇನು ಕ್ರಮಗಳು? :

ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಗಳ ಸೇವೆಯನ್ನು ಬಳಸಿಕೊಳ್ಳಲು ಸರಕಾರ ನಿರ್ಧರಿಸಿದೆ. ತಜ್ಞ ವೈದ್ಯರ ಮೇಲ್ವಿಚಾರಣೆ ಯಲ್ಲಿ ಟೆಲಿ ಕನ್ಸಲ್ಟೆàಶನ್‌ ಮತ್ತು ಅಲ್ಪ ರೋಗಲಕ್ಷಣ ವಿರುವ ಸೋಂಕು  ಪೀಡಿತರ ಆರೈಕೆಯನ್ನು ಈ ವೈದ್ಯ ವಿದ್ಯಾರ್ಥಿ ಗಳು ಮಾಡಲಿದ್ದಾರೆ. ಇದರಿಂದ ಪ್ರಸ್ತುತ ಸೋಂಕು ಪೀಡಿತರ ಸೇವೆಯಲ್ಲಿರುವ ವೈದ್ಯರ ಮೇಲಿನ ಒತ್ತಡವೂ ತಗ್ಗಲಿದೆ ಎಂದು ಪ್ರಧಾನಿಯವರ ಕಾರ್ಯಾಲಯ ಹೇಳಿದೆ.

ಬಿಎಸ್‌ಸಿ ಅಥವಾ ಜಿಎನ್‌ಎಂ ವಿದ್ಯಾರ್ಹತೆ ಹೊಂದಿರುವ ನರ್ಸ್‌ಗಳನ್ನು ಹಿರಿಯ ವೈದ್ಯರ ಮೇಲ್ವಿಚಾರಣೆಯಲ್ಲಿ ಪೂರ್ಣ ಪ್ರಮಾಣ ದಲ್ಲಿ ಕೋವಿಡ್‌ ನರ್ಸಿಂಗ್‌ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಈ ರೀತಿಯ ಸೇವೆಗಳಲ್ಲಿ ಕನಿಷ್ಠ 100 ದಿನಗಳ ಕಾಲ ತೊಡಗುವವರಿಗೆ ಮುಂಬರುವ ಸರಕಾರಿ ನೇಮಕಾತಿ ವೇಳೆ ಆದ್ಯತೆ ನೀಡ ಲಾಗುತ್ತದೆ ಎಂದೂ ಪ್ರಧಾನಿಯವರ ಕಾರ್ಯಾಲಯ ಭರವಸೆ ನೀಡಿದೆ.

ಲಸಿಕೆ, ವಿಮೆ ಸೌಲಭ್ಯ :

ಯಶಸ್ವಿಯಾಗಿ ಶತ ದಿನಗಳ ಸೇವೆ ಪೂರೈಸುವ ವರಿಗೆ ಪ್ರಧಾನಿಯವರ ಪ್ರತಿಷ್ಠಿತ “ಕೋವಿಡ್‌ ರಾಷ್ಟ್ರೀಯ ಸೇವಾ ಸಮ್ಮಾನ’ ಪ್ರಶಸ್ತಿ ನೀಡಿ ಗೌರವಿ ಸಲಾಗುತ್ತದೆ. ವೈದ್ಯ ವಿದ್ಯಾರ್ಥಿಗಳು ಮತ್ತು ಇತರ ವೃತ್ತಿಪರರಿಗೆ ಲಸಿಕೆ, ಸರಕಾರದ ವಿಮಾ ಸೌಲಭ್ಯ ನೀಡಲಾಗುತ್ತದೆ ಎಂದೂ ಪಿಎಂಒ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next