Advertisement
ಇದೇ ವೇಳೆ ಸರ್ವೋಚ್ಚ ನ್ಯಾಯಾಲಯವು ನೀಟ್-ಯುಜಿ ವಿದ್ಯಾರ್ಥಿಗಳಿಗೆ ಜು. 6ರಂದು ನಡೆಯಲಿರುವ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿದೆ. ಆದರೆ ಈ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳು, ಇತರ ಸಂಸ್ಥೆಗಳು ಪ್ರವೇಶ ನೀಡುವ ಬಗ್ಗೆ ತನ್ನ ಅಂತಿಮ ತೀರ್ಪನ್ನು ನೋಡಿ ನಿರ್ಧರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಮೇ 5ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಫಲಿತಾಂಶವನ್ನು ಸಮಗ್ರವಾಗಿ ರದ್ದು ಮಾಡಬೇಕು, ಜು. 6ರ ಕೌನ್ಸಿಲಿಂಗ್‌ಗೂ ತಡೆ ನೀಡಬೇಕು ಎಂದು ವಿದ್ಯಾರ್ಥಿಗಳ ಪರ ಅರ್ಜಿದಾರರು ವಾದಿಸಿದ್ದರು.
ಕೃಪಾಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಜೂ. 23ರಂದು ಮರುಪರೀಕ್ಷೆ ನಡೆಸಲಾಗುವುದು. ಆ ಫಲಿತಾಂಶವನ್ನೇ ಅಂತಿಮವೆಂದು ಪರಿಗಣಿಸಲಾಗುವುದು. ಜೂ. 30ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಎನ್‌ಟಿಎ ಹೇಳಿದೆ. ಕೃಪಾಂಕ ನೀಡಿದ್ದು ಏಕೆ?
Related Articles
Advertisement
ಕೃಪಾಂಕ ರದ್ದತಿಯಿಂದ ನೀಟ್ ಅಗ್ರಸ್ಥಾನಿಗಳ ಸಂಖ್ಯೆ 67ರಿಂದ 61ಕ್ಕೆ ಇಳಿದಿದೆ. ಕೃಪಾಂಕದ ಕಾರಣದಿಂದ ಹರಿಯಾಣದ ಒಂದೇ ತರಬೇತಿ ಕೇಂದ್ರದ ಒಟ್ಟು 6 ಮಂದಿ 720ಕ್ಕೆ 720 ಅಂಕ ಪಡೆದಿದ್ದರು. ಇವರು ಕೃಪಾಂಕಗಳ ಜತೆಗೆ ಅಗ್ರಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಅಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ಕಂಡುಬಂದಿಲ್ಲ. ಯಾವುದೇ ವಿದ್ಯಾರ್ಥಿ ಗಳಿಗೂ ತೊಂದರೆಯಾಗುವುದಿಲ್ಲ. ಎನ್‌ಟಿಎ ಜವಾಬ್ದಾರಿಯುತ ಸಂಸ್ಥೆ. ಅದು ವಾರ್ಷಿಕವಾಗಿ 50 ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುತ್ತದೆ. ಉನ್ನತ ಮಟ್ಟದ ಪರೀಕ್ಷೆಗಳನ್ನೂ ನಡೆಸುತ್ತದೆ. ನೀಟ್ ಅಂಕ ನೀಡಲು ಸರ್ವೋಚ್ಚ ನ್ಯಾಯಾ ಲಯದ ನಿರ್ದೇಶನವನ್ನೇ ಅನುಸರಿಸಲಾಗಿದೆ. ಅದರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಸರಿ ಮಾಡಲಾಗುವುದು-ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವ ನೀಟ್ ಪರೀಕ್ಷೆಯಲ್ಲಿ ಬರೀ ಕೃಪಾಂಕ ನೀಡಿರು ವುದು ಮಾತ್ರ ಸಮಸ್ಯೆಯಲ್ಲ. ಅಲ್ಲಿ ಅಪ್ರಾಮಾಣಿಕತೆಯಿದೆ, ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ, ಭ್ರಷ್ಟಾಚಾರ ನಡೆದಿದೆ. ಮೋದಿ ಸರಕಾರದ ನಡೆಯಿಂದ 24 ಲಕ್ಷ ವಿದ್ಯಾರ್ಥಿ ಗಳ ಭವಿಷ್ಯ ಅತಂತ್ರವಾಗಿದೆ. ಇದರ ವಿರುದ್ಧ ಸಿಬಿಐ ತನಿಖೆ ನಡೆಯ ಬೇಕು, ಇಲ್ಲವೇ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು.
-ಮಲ್ಲಿಕಾರ್ಜುನ ಖರ್ಗೆ,ಕಾಂಗ್ರೆಸ್ ಅಧ್ಯಕ್ಷ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಗೌರವ್ ಗೊಗೋಯಿ, ಈ ವಿಚಾರವನ್ನು ಸಂಸತ್ ಅಧಿವೇಶನದಲ್ಲಿ ಎತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದರು. ಹಲವೆಡೆ ಪ್ರತಿಭಟನೆ ನೀಟ್ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಗುರುವಾರ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿದೆ. “24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬಯಸುತ್ತಿದ್ದಾರೆ, ಹಗರಣವನ್ನಲ್ಲ’ ಎಂದು ಘೋಷಣೆಗಳನ್ನು ಕೂಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ. ಕೃಪಾಂಕ ರದ್ದು ಮಾಡುವ ಮೂಲಕ ಕೇಂದ್ರ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಇನ್ನಾದರೂ ಎಂಬಿಬಿಎಸ್ ಆಯ್ಕೆ ವಿಧಾನ ನಿರ್ಧರಿಸುವ ಅಧಿಕಾರ ಮತ್ತೆ ರಾಜ್ಯಗಳಿಗೆ ನೀಡಲಿ. ಎಂ.ಕೆ.ಸ್ಟಾಲಿನ್, ತಮಿಳುನಾಡು ಸಿಎಂ