Advertisement

ಇಂದು ನೀಟ್‌ ಪರೀಕ್ಷೆ: 1.34 ಲಕ್ಷ ವಿದ್ಯಾರ್ಥಿಗಳ ನೋಂದಣಿ

12:40 AM May 07, 2023 | Team Udayavani |

ಬೆಂಗಳೂರು: ವೈದ್ಯಕೀಯ ಮತ್ತು ದಂತವೈದ್ಯಕೀಯ ಪದವಿ ಪ್ರವೇಶಕ್ಕೆ ರವಿವಾರ (ಮೇ 7) ದೇಶಾದ್ಯಂತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ನಡೆಯಲಿದ್ದು, ರಾಜ್ಯದಲ್ಲಿ 1.34 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ಧಾರೆ.

Advertisement

ಮಧ್ಯಾಹ್ನ 2ರಿಂದ ಸಂಜೆ 5.20ರ ವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಮಧ್ಯಾಹ್ನ 12.30ರೊಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು ಎಂದು ಪರೀಕ್ಷಾ ಪ್ರಾಧಿಕಾರವಾದ ರಾಷ್ಟ್ರೀಯ ಟೆಸ್ಟಿಂಗ್‌ ಎಜೆನ್ಸಿ (ಎನ್‌ಟಿಎ) ತಿಳಿಸಿದೆ.

ರಾಜ್ಯದ 1,34,379 ವಿದ್ಯಾರ್ಥಿಗಳು ಸೇರಿ ದೇಶಾದ್ಯಂತ 20,87,445 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ 14,753 ಮಂದಿ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಕನ್ನಡ ಸೇರಿ ಇಂಗ್ಲಿಷ್‌, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು, ಉರ್ದು, ಪಂಜಾಬಿ ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶವಿದೆ.

ಪರೀಕ್ಷಾ ಕೇಂದ್ರಕ್ಕೆ ಏನನ್ನು ಕೊಂಡೊಯ್ಯಬೇಕು?
ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದ ಜತೆಗೆ ಒಂದು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಆಧಾರ್‌, ಪಾನ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಇತ್ಯಾದಿ ಸರಕಾರ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿ ಹೊಂದಿರಬೇಕು.

Advertisement

ಮಧುಮೇಹದಿಂದ ಬಳಲುತ್ತಿರುವ ಅಭ್ಯರ್ಥಿಗಳು ಸಕ್ಕರೆ ಮಾತ್ರೆಗಳು/ಹಣ್ಣುಗಳು (ಬಾಳೆಹಣ್ಣು, ಸೇಬು, ಕಿತ್ತಳೆ) ಮತ್ತು ಪಾರದರ್ಶಕ ನೀರಿನ ಬಾಟಲಿಗಳಂತಹ ತಿನ್ನಬಹುದಾದ ಪದಾರ್ಥಗಳನ್ನು ಕೊಂಡೊಯ್ಯಲು ಅವಕಾಶವಿದೆ.

ಎಲೆಕ್ಟ್ರಾನಿಕ್‌ ವಸ್ತಗಳು, ಕ್ಯಾಲ್ಕುಲೇಟರ್‌, ಮೊಬೈಲ್‌ ಫೋನ್‌, ಬ್ಲೂಟೂತ್‌, ಇಯರ್‌ ಫೋನ್‌, ವಾಚ್‌, ಆಭರಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ವಿದ್ಯಾರ್ಥಿಗಳು ಸರಳ ಉಡುಗೆ, ಅರ್ಧ ತೋಳಿನ ಉಡುಗೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಶೂ ಧರಿಸುವಂತಿಲ್ಲ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next