Advertisement

ಸುಲಲಿತವಾಗಿ ನಡೆದ ನೀಟ್‌: 3,843 ಪರೀಕ್ಷಾ ಕೇಂದ್ರಗಳಲ್ಲಿ 90% ವಿದ್ಯಾರ್ಥಿಗಳು ಹಾಜರು

10:35 AM Sep 14, 2020 | sudhir |

ಹೊಸದಿಲ್ಲಿ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಾಷ್ಟ್ರಮಟ್ಟದ ವೈದ್ಯಕೀಯ ಕೋರ್ಸ್‌ ಪ್ರವೇಶ ಪರೀಕ್ಷೆ (ನೀಟ್‌) ರವಿವಾರ ದೇಶದ 3,843 ಪರೀಕ್ಷಾ ಕೇಂದ್ರಗಳಲ್ಲಿ ಅಪರಾಹ್ನ 2 ಗಂಟೆಯಿಂದ ಸಂಜೆ 5ರ ವರೆಗೆ ಜರಗಿತು. ಪರೀಕ್ಷೆಗಾಗಿ ನೋಂದಾಯಿಸಲ್ಪಟ್ಟಿದ್ದ ಸುಮಾರು 15.97 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ. 85ರಿಂದ 90ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

Advertisement

ನಾಲ್ವರು ಆತ್ಮಹತ್ಯೆ: ನೀಟ್‌ ಪರೀಕ್ಷೆಯ ಒತ್ತಡ ತಾಳಲಾರದೆ ತಮಿಳುನಾಡಿನಲ್ಲಿ ಕಳೆದೊಂದು ವಾರದಲ್ಲಿ ಒಟ್ಟು ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಮಧುರೈನಲ್ಲಿ ಜ್ಯೋತಿಶ್ರೀ ದುರ್ಗಾ, ಧರ್ಮಪುರಿಯಲ್ಲಿ ಆದಿತ್ಯ ಎಂಬ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ರವಿವಾರ, ತಿರುಚೆಂಗೋಡ್‌ನ‌ಲ್ಲಿ ಮೋತಿಲಾಲ್‌, ಅರಿಯಾಲೂರ್‌ನ ವಿಘ್ನೇಶ್‌ ಎಂಬ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳ ಸಮೂಹವೊಂದು ಮಧುರೈನ ನೀಟ್‌ ಪರೀಕ್ಷಾ ಕೇಂದ್ರವಾದ ಕೇಂದ್ರೀಯ ವಿದ್ಯಾನಿಲಯ ಶಾಲೆಯ ಮುಂದೆ ಬುಧವಾರ ಪ್ರತಿಭಟನೆ ನಡೆಸಿತು. ಪೊಲೀಸರು 23 ಪ್ರತಿಭಟನಕಾರರನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next