Advertisement

25 ವರ್ಷ ಮೇಲ್ಪಟ್ಟವರೂ ನೀಟ್‌ ಬರೆಯಲಿ: ಸುಪ್ರೀಂ

01:53 AM Apr 01, 2017 | Karthik A |

ಹೊಸದಿಲ್ಲಿ: ನೀಟ್‌ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳ ವಯಸ್ಸಿಗೆ ಸಿಬಿಎಸ್‌ಇ ನಿಗದಿಗೊಳಿಸಿದ್ದ ಮಿತಿಯನ್ನು ಸಡಿಲಿಸಿರುವ ಸುಪ್ರೀಂ ಕೋರ್ಟು, 25 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕೂಡ ಈ ಬಾರಿಯ ನೀಟ್‌ ಬರೆಯಬಹುದು ಎಂದು ತಿಳಿಸಿದೆ. ಇದರೊಂದಿಗೆ ಅರ್ಜಿಗಳನ್ನು ಭರ್ತಿ ಮಾಡಿ ಕಳಿಸುವ ದಿನಾಂಕವನ್ನು ಎಪ್ರಿಲ್‌ 5ರವರೆಗೆ ವಿಸ್ತರಿಸಿರುವ ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ಪೀಠ, ಮುಂದಿನ ಶೈಕ್ಷಣಿಕ ವರ್ಷದಿಂದ ವಯೋಮಿತಿ ನಿಗದಿಪಡಿಸಬಹುದು ಎಂದು ತಿಳಿಸಿದೆ. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ವಯೋಮಿತಿಯನ್ನು 25 ವರ್ಷಕ್ಕೆ ನಿಗದಿಗೊಳಿಸಿದ ಸಿಬಿಎಸ್‌ಇ ಕ್ರಮ ವಿರೋಧಿಸಿ ಸುಪ್ರೀಂಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next