Advertisement

ನೀಟ್‌-2017 ಪರೀಕ್ಷೆ ಅಮಾನ್ಯಗೊಳಿಸಲಾಗದು 

04:00 AM Jul 15, 2017 | Karthik A |

ಹೊಸದಿಲ್ಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ ನೀಟ್‌-2017ರ ಪರೀಕ್ಷೆ ರದ್ದು ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. 11.35 ಲಕ್ಷ ಆಕಾಂಕ್ಷಿಗಳ ಪೈಕಿ ಸುಮಾರು 6 ಲಕ್ಷ ಮಂದಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕೌನ್ಸೆಲಿಂಗ್‌ ಪ್ರಕ್ರಿಯೆಯೂ ಶುರುವಾಗಿದೆ. ಇಂಥ ಸಮಯದಲ್ಲಿ ಫ‌ಲಿತಾಂಶವನ್ನು ಅಮಾನ್ಯಗೊಳಿಸಲು ಆಗದು ಎಂದು ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಆಂಧ್ರದಲ್ಲಿ 3 ಬೇರೆ ಬೇರೆ ಬಗೆಯ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ರ್‍ಯಾಂಕಿಂಗ್‌ ನೀಡುವಾಗ ದೇಶದ ಎಲ್ಲ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ. ಹಾಗಾಗಿ 3 ಬಗೆಯ ಪ್ರಶ್ನೆ ಪತ್ರಿಕೆ ವಿತರಿಸಿದ ಕ್ರಮ ಸರಿಯಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next