ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಭೇಟೆ ಮುಂದುವರಿದಿದ್ದು,ಶನಿವಾರ ಒಂದೇ ದಿನ 4 ಬಂಗಾರದ ಪದಕಗಳು ಬಂದಿವೆ.
ನೀರಜ್ ಚೋಪ್ರಾ ಅವರು ಅಥ್ಲೆಟಿಕ್ಸ್ ವಿಭಾಗದ ಜಾವೆಲಿನ್ ಎಸೆತದಲ್ಲಿ ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದಾರೆ. 86.47 ಮೀಟರ್ ದೂರಕ್ಕೆ ಈಟಿ ಎಸೆದು ಪದಕಜಯಿಸಿದ್ದಾರೆ.
ಪ್ರಸಕ್ತ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ.
ಮಹಿಳೆಯರ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ , ಪುರುಷರ ಶೂಟಿಂಗ್‌ನಲ್ಲಿ ಸಂಜೀವ್ ರಜಪೂತ್ ಮತ್ತು ಪುರುಷರ ಬಾಕ್ಸಿಂಗ್‌ನಲ್ಲಿ ಗೌರವ್ ಸೋಲಂಕಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
ಪದಕ ಪಟ್ಟಿಯಲ್ಲಿ ಭಾರತ 21 ಬಂಗಾರ, 13 ಬೆಳ್ಳಿ ಮತ್ತು 14 ಕಂಚಿನ ಪದಕಗಳೊಂದಿಗೆ 3 ನೇ ಸ್ಥಾನದಲ್ಲಿದೆ. 69 ಚಿನ್ನದ ಪದಕಗಳೊಂದಿಗೆ ಆಸ್ಟೇಲಿಯಾ ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿದೆ.
ಮಹಿಳೆಯರ 45 ಕೆಜಿ ವಿಭಾದಲ್ಲಿ ಮೇರಿ ಕೋಮ್ ಚಿನ್ನ ಗೆದ್ದರೆ, ಪುರುಷರ 52 ಕೆಜಿ ವಿಭಾಗದಲ್ಲಿ ಗೌರವ್ ಸೋಲಂಕಿ ಚಿನ್ನ ಗೆದ್ದರು. ಪುರುಷರ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಸಂಜೀವ್ ರಜಪೂತ್ ಚಿನ್ನ ಗೆದ್ದಿದ್ದಾರೆ.