Advertisement

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

11:27 PM Oct 27, 2021 | Team Udayavani |

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ ನಲ್ಲಿ ಪದಕ ಬೇಟೆಯಾಡಿದ ಸಾಧಕರನ್ನೊಳಗೊಂಡ 11 ಕ್ರೀಡಾಪಟುಗಳ ಹೆಸರನ್ನು ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

Advertisement

ಜತೆಗೆ 25 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಸೂಚಿಸಲಾಗಿದೆ. ಬುಧವಾರ “ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿ’ ಈ ಆಟಗಾರರ ಯಾದಿಯನ್ನು ಪ್ರಕಟಿಸಿತು.

ಕೇಂದ್ರ ಕ್ರೀಡಾ ಸಚಿವಾಲಯ ಇನ್ನು ಕೆಲವೇ ದಿನಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಿದೆ.

ಒಲಿಂಪಿಕ್ಸ್‌ ಜಾವೆಲಿನ್‌ ಎಸೆತದಲ್ಲಿ ಬಂಗಾರ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ, ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿ ದಹಿಯಾ, ಹಾಕಿ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌, ಪ್ಯಾರಾ ಶೂಟರ್‌ ಅವನಿ ಲೇಖರಾ, ವನಿತಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಹೆಸರು ಖೇಲ್‌ರತ್ನ ಯಾದಿಯ ಮುಂಚೂಣಿಯಲ್ಲಿದೆ. ಮೊದಲ ಬಾರಿಗೆ ಫ‌ುಟ್ಬಾಲಿಗನೊಬ್ಬನ ಹೆಸರು ನಮೂದಿಸಲ್ಪಟ್ಟಿರುವುದು ಈ ಸಲದ ವಿಶೇಷ. ಇವರೆಂದರೆ ಕಪ್ತಾನ ಸುನೀಲ್‌ ಚೆಟ್ರಿ.

ಇದನ್ನೂ ಓದಿ:ಟಿ20 ಶ್ರೇಯಾಂಕ: ಕೊಹ್ಲಿ, ರಾಹುಲ್‌ ಕುಸಿತ

Advertisement

ಕ್ರಿಕೆಟಿಗ ಶಿಖರ್‌ ಧವನ್‌, ಪ್ಯಾರಾ ಟಿಟಿ ಆಟಗಾರ್ತಿ ಭವಿನಾ ಪಟೇಲ್‌, ಪ್ಯಾರಾ ಶಟ್ಲರ್‌ಗಳಾದ ಸುಹಾಸ್‌ ಯತಿರಾಜ್‌, ಹೈಜಂಪರ್‌ ನಿಶಾದ್‌ ಕುಮಾರ್‌ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಪಿ.ಆರ್‌. ಶ್ರೀಜೇಶ್‌ ಮತ್ತು ಮನ್‌ಪ್ರೀತ್‌ ಸಿಂಗ್‌ ಹೊರತುಪಡಿಸಿ ಒಲಿಂಪಿಕ್ಸ್‌ ಹಾಕಿಯಲ್ಲಿ ಕಂಚು ಗೆದ್ದ ಇಡೀ ತಂಡವನ್ನು ಅರ್ಜುನ ಪ್ರಶಸ್ತಿಗೆ ಸೂಚಿಸಲಾಗಿದೆ.

ಖೇಲ್‌ರತ್ನಕ್ಕೆ ಶಿಫಾರಸುಗೊಂಡವರು
ನೀರಜ್‌ ಚೋಪ್ರಾ (ಆ್ಯತ್ಲೆಟಿಕ್ಸ್‌), ರವಿ ದಹಿಯಾ (ಕುಸ್ತಿ), ಲವ್ಲಿನಾ ಬೊರ್ಗೊಹೇನ್‌ (ಬಾಕ್ಸಿಂಗ್‌), ಪಿ.ಆರ್‌. ಶ್ರೀಜೇಶ್‌ (ಹಾಕಿ), ಮಿಥಾಲಿ ರಾಜ್‌ (ಕ್ರಿಕೆಟ್‌), ಸುನೀಲ್‌ ಚೆಟ್ರಿ (ಫ‌ುಟ್‌ಬಾಲ್‌), ಅವನಿ ಲೇಖರಾ (ಶೂಟಿಂಗ್‌), ಮನೀಷ್‌ ನರ್ವಾಲ್‌ (ಶೂಟಿಂಗ್‌), ಸುಮಿತ್‌ ಅಂಟಿಲ್‌ (ಆ್ಯತ್ಲೆಟಿಕ್ಸ್‌), ಪ್ರಮೋದ್‌ ಭಗತ್‌ (ಬ್ಯಾಡ್ಮಿಂಟನ್‌), ಕೃಷ್ಣ ನಗರ್‌ (ಬ್ಯಾಡ್ಮಿಂಟನ್‌).

Advertisement

Udayavani is now on Telegram. Click here to join our channel and stay updated with the latest news.

Next