ಯೂಜಿನ್ (ಯುಎಸ್‌ಎ): ರವಿವಾರ ಬೆಳಗ್ಗೆ ಹೆಮ್ಮೆಯ ಆ್ಯತ್ಲೀಟ್, ಚಾವೆಲಿನ್ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಬಂಗಾರದಂಥ ಸುದ್ದಿ ಬಿತ್ತರಿಸುವುದನ್ನು ಆಲಿಸಲು ದೇಶವೇ ತುದಿಗಾಲಲ್ಲಿ ನಿಂತಿದೆ.
ಅಮೆರಿಕದ ಯೂಜಿನ್‌ನಲ್ಲಿ “ಡೈಮಂಡ್ ಲೀಗ್ ಫೈನಲ್ಸ್’ನ ಜಾವೆಲಿನ್ ಸ್ಪರ್ಧೆ ನಡೆಯಲಿದ್ದು, ಹಾಲಿ ಚಾಂಪಿಯನ್ ನೀರಜ್ ಪ್ರಶಸ್ತಿ ಉಳಿಸಿಕೊಳ್ಳುವರೇ ಎಂಬುದು ಎಲ್ಲರ ಪಾಲಿನ ಬಹು ದೊಡ್ಡ ನಿರೀಕ್ಷೆ ಹಾಗೂ ಕುತೂಹಲವಾಗಿದೆ.
25 ವರ್ಷದ ನೀರಜ್ ಚೋಪ್ರಾ ಕಳೆದ ವರ್ಷದ ಜೂರಿಚ್ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಯೂಜಿನ್‌ನಲ್ಲೂ ಜಯಿಸಿದರೆ ಡೈಮಂಡ್ ಲೀಗ್ ಫೈನಲ್ಸ್ ಪ್ರಶಸ್ತಿ ಉಳಿಸಿಕೊಂಡ ವಿಶ್ವದ 3ನೇ ಆ್ಯತ್ಲೀಟ್ ಎನಿಸಲಿದ್ದಾರೆ. 2012 ಮತ್ತು 2013ರಲ್ಲಿ ಜೆಕ್ ಗಣರಾಜ್ಯದ ವಿಟೆಸ್ಲಾವ್ ವೆಸ್ಲಿ, 2016 ಮತ್ತು 2017ರಲ್ಲಿ ಇದೇ ದೇಶದ ಜೇಕಬ್ ವಾಲೆªಶ್ ಈ ಸಾಧನೆಗೈದಿದ್ದರು. ಪ್ರಸ್ತುತ ವಾಲೆªಶ್ ಭಾರತೀಯನ ಪ್ರಮುಖ ಎದುರಾಳಿಯಾಗಿದ್ದಾರೆ.
ಕಳೆದ ತಿಂಗಳ ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಿರೀಟ ಧರಿಸಿ ಇನ್ನಷ್ಟು ಎತ್ತರಕ್ಕೆ ಏರಿದ ಕಾರಣ ನೀರಜ್ ಚೋಪ್ರಾ ಮೇಲೆ ನಿರೀಕ್ಷೆ ಹೆಚ್ಚಿದೆ. ಫೈನಲ್ಸ್‌ನಲ್ಲಿ ಸ್ಪರ್ಧೆಗೆ ಇಳಿಯುವ ಇತರರೆಂದರೆ ಒಲಿವರ್ ಹೆಲಾಂಡರ್ (ಫಿನ್ಲಂಡ್), ಆ್ಯಂಡ್ರಿಯನ್ ಮಡೇìರ್ (ಮಾಲ್ಡೋವಾ), ಆ್ಯಂಡರ್ಸನ್ ಪೀಟರ್ (ಗ್ರೆನೆಡಾ), ಕರ್ಟಿಸ್ ಥಾಮ್ಸನ್ (ಯುಎಸ್‌ಎ) ಮತ್ತು ಜೇಕಬ್ ವಾಲೆªಶ್ (ಜೆಕ್ ಗಣರಾಜ್ಯ).