Advertisement
ಕುವೋರ್ತಾನ್ ಗೇಮ್ಸ್‌ನ ಜಾವೆಲಿನ್ ಸ್ಪರ್ಧೆಯ ಮೊದಲ ಸುತ್ತಿನಲ್ಲೇ 86.69 ಮೀ. ದೂರದ ಸಾಧನೆಯೊಂದಿಗೆ ನೀರಜ್ ಚೋಪ್ರಾ ಚಿನ್ನಕ್ಕೆ ಮುತ್ತಿಕ್ಕಿದರು. ಇದು ಟೋಕಿಯೊ ಒಲಿಂಪಿಕ್ಸ್ ಬಳಿಕ ಅವರಿಗೆ ಒಲಿದ ಮೊದಲ ಸ್ವರ್ಣ ಪದಕ. 2012ರ ಒಲಿಂಪಿಕ್ಸ್ ಚಾಂಪಿಯನ್, ಟ್ರೆನಿಡಾಡ್ ಮತ್ತು ಟೊಬಾಗೋದ ಕೆಶ್ರೋನ್ ವಾಲ್ಕಾಟ್ 86.64 ಮೀ. ಸಾಧನೆಯೊಂದಿಗೆ ಬೆಳ್ಳಿ ಪದಕ ಗೆದ್ದರು. ಅವರೂ ಮೊದಲ ಸುತ್ತಿನಲ್ಲೇ ಈ ದೂರ ಕಾಯ್ದುಕೊಂಡರು. ಹಾಲಿ ವಿಶ್ವ ಚಾಂಪಿಯನ್ ಗ್ರೆನಡಾದ ಆ್ಯಂಡರ್ಸನ್ ಪೀಟರ್ 84.75 ಮೀ. ದೂರ ಎಸೆದು ಕಂಚು ಜಯಿಸಿದರು. ಇವರೂ ಈ ದೂರವನ್ನು ಮೊದಲ ಸುತ್ತಿನಲ್ಲೇ ದಾಖಲಿಸಿದ್ದು ವಿಶೇಷ. ಪೀಟರ್ ನಾಲ್ಕೇ ದಿನಗಳ ಅಂತರದಲ್ಲಿ ನೀರಜ್ ಕೈಯಲ್ಲಿ ಎರಡನೇ ಸೋಲನುಭವಿಸಿದರು.
ಕಳೆದ ವಾರವಷ್ಟೇ ನಡೆದ ಪಾವೋ ನುರ್ಮಿ ಗೇಮ್ಸ್ ನಲ್ಲಿ ನೀರಜ್ ಚೋಪ್ರಾ ಇದಕ್ಕಿಂತ ಉತ್ತಮ ಸಾಧನೆ ಗೈದಿದ್ದರು. ಅಲ್ಲಿ 89.30 ಮೀ. ದೂರದ ಸಾಧನೆ ಇವರದಾಗಿತ್ತು. ಇದಕ್ಕೆ ಒಲಿದದ್ದು ಬೆಳ್ಳಿ ಪದಕ. ಜಾರಿ ಬಿದ್ದ ಚೋಪ್ರಾ
ಮಳೆಯಿಂದಾಗಿ ಟ್ರ್ಯಾಕ್ ಒದ್ದೆಯಾದ್ದರಿಂದ ಕುವೋರ್ತಾನ್ ಗೇಮ್ಸ್‌ನ 3ನೇ ಸುತ್ತಿನಲ್ಲಿ ನೀರಜ್ ಚೋಪ್ರಾ ಜಾರಿ ಬಿದ್ದರು. ಎಡ ಭುಜ ಟಫ್ìಗೆ ಬಡಿದುದರಿಂದ ನೋವು ಕಾಡಿತು. ಆದರೆ ಇದೇನೂ ಗಂಭೀರ ಸಮಸ್ಯೆ ಅಲ್ಲ ಎಂಬುದಾಗಿ ಚೋಪ್ರಾ ಹೇಳಿದ್ದಾರೆ.
Related Articles
Advertisement
ಆ್ಯತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಕೂಡ ಈ ಘಟನೆ ಕುರಿತು ಟ್ವೀಟ್ ಮಾಡಿದೆ. “ವೆಲ್‌ಡನ್ ನೀರಜ್ ಚೋಪ್ರಾ. ಮತ್ತೂಂದು ಉನ್ನತ ಮಟ್ಟದ ಸಾಧನೆಗಾಗಿ ಆಭಿನಂದನೆಗಳು’ ಎಂದಿರುವ ಎಎಫ್ಐ, ಅವರ ಗಾಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದಿದೆ.