Advertisement

ತೆಂಗಿನ ಮರಕ್ಕೆ ಬೇವಿನ ಎಣ್ಣೆ ಬಳಕೆ ಸೂಕ್ತ

12:06 PM Jan 04, 2018 | |

ಬ್ರಹ್ಮಾವರ: ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದಿಂದ ವಿಜ್ಞಾನಿಗಳು ತೆಂಗಿನ ಬೆಳೆಯಲ್ಲಿ ಬರುವ ಬಿಳಿ ನೊಣಗಳ ಬಾಧೆಯನ್ನು ಅಧ್ಯಯನ ಮಾಡಲು ಕೋಟೇಶ್ವರ ಹಾಗೂ ಕುಂದಾಪುರ ಭಾಗದಲ್ಲಿ ಸಮೀಕ್ಷೆ ನಡೆಸಿದ್ದಾರೆ.

Advertisement

ಈ ಪ್ರಕಾರ ಮೂರು ಬಿಳಿ ನೊಣದ ಪ್ರಭೇದಗಳು ಒಂದೇ ಕಡೆ ಕಂಡುಬಂದಿದ್ದು ವಿಜ್ಞಾನಿಗಳಿಗೆ ಅಚ್ಚರಿ ಮೂಡಿಸಿದೆ. ಆ ಮೂರು ಪ್ರಭೇದಗಳೆಂದರೆ ಅಲಿರೋಡಿಕಸ್‌ ರೇಗಿಪರ್ಕಿಲೇಟಸ್‌, ಅಲಿರೋಡಿಕಸ್‌ ಡಿಸ್ಪರ್ಸಸ್‌ ಮತ್ತು ಅಲಿರೋಕ್ಯಾಂತಸ್‌ ಅರೇಕೆ ದೊರೆತಿದೆ. ವಿಜ್ಞಾನಿಗಳು ಯಾವುದೇ ಕೀಟ ನಾಶಕದ ಆವಶ್ಯಕತೆವಿಲ್ಲವೆಂದು ತಮ್ಮ ಅನುಭವದ ಮೂಲಕ ಹೇಳಿಕೊಂಡಿದ್ದಾರೆ. 

ಏಕೆಂದರೆ ಆ ಕೀಟಗಳು ಸ್ವಾಭಾವಿಕವಾಗಿ ಪರತಂತ್ರ ಜೀವಿಗಳಿಂದ ನಿಯಂತ್ರಣಕ್ಕೆ ಬರುತ್ತಿವೆ. ಚಿಕ್ಕ ತೋಟದಲ್ಲಿ ಬಾಧೆ ಹೆಚ್ಚಾಗಿದ್ದರೆ ಬೇವಿನ ಎಣ್ಣೆಯನ್ನು ಪ್ರತಿ ಲೀಟರಿಗೆ 4 ಎಂ.ಎಲ್‌ ಹಾಕಿ ಸಿಂಪಡಣೆ ಮಾಡುವಂತೆ ಸೂಚಿಸಿದ್ದಾರೆ.

ರೈತರೇ ಎಚ್ಚರ
ಇತ್ತೀಚೆಗೆ ಕೆಲವು ಖಾಸಗಿ ಕಂಪೆನಿಯವರು ಚುಚ್ಚುಮದ್ದುಗಳನ್ನು ತಂದು ನಾವು ನಿಮ್ಮ ಗಿಡವನ್ನು ಸರಿಪಡಿಸುತ್ತೇವೆ ಎಂದು ಪ್ರತಿ ಗಿಡಕ್ಕೆ  400 ರೂ.ನಿಂದ 600 ರೂ.ಗಳನ್ನು ಪಡೆಯುತ್ತಿರುವ ವಿಚಾರ ತಿಳಿದು ಬಂದಿದೆ. ರೈತ ಬಾಂಧವರು ಈ ಮಾತನ್ನು ನಂಬಬಾರದಾಗಿ ವಿಜ್ಞಾನಿಗಳು ಹೇಳಿದ್ದಾರೆ. ರೈತರು ಸಮಸ್ಯೆ ಇದ್ದಾಗ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ (ದೂ: 0820-2563923)ವನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next