Advertisement

“ನೀಲಾವರ ಸುರೇಂದ್ರ ಅಡಿಗರು ಕನ್ನಡದ ಕನಸುಗಾರ’

06:21 PM Oct 02, 2021 | Team Udayavani |

ಕೋಟ: ಉಡುಪಿ ಜಿಲ್ಲಾ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಕನ್ನಡದ ಕನಸುಗಾರರು. ಅವರ ಮನಸ್ಸು, ದೇಹ ಸದಾ ಕನ್ನಡದ ಸೇವೆಗಾಗಿ ಮಿಡಿಯುತ್ತದೆ ಎಂದು ಹಿರಿಯ ಸಾಹಿತಿ ವೈದೇಹಿ ತಿಳಿಸಿದರು.

Advertisement

ಅವರು ನೀಲಾವರ ಸುರೇಂದ್ರ ಅಡಿಗ ಅಭಿನಂದನ ಸಮಿತಿ ವತಿಯಿಂದ ಕೋಟದ ಮಾಂಗಲ್ಯ ಮಂದಿರದಲ್ಲಿ ಅ.2ರಂದು ಜರಗಿದ, ಅಡಿಗರ ಅರವತ್ತರ ಸಂಭ್ರಮ, ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನೀಲಾವರ ಅಡಿಗರ ಬದುಕು-ಬರಹಗಳಲ್ಲಿ ನನಗೆ ಪಂಜೆ ಮಂಗೇಶರಾಯರ ಹೋಲಿಕೆ ಕಂಡು ಬರುತ್ತದೆ. ಅಡಿಗರು ಆ ಕಾಲಘಟ್ಟದಲ್ಲಿ ಬದುಕಿದ್ದಾರೆ ಅಷ್ಟೇ ಮನ್ನಣೆ ಪಡೆಯುತ್ತಿದ್ದರು ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್‌ ಆಳ್ವಾ ಮಾತನಾಡಿ, ಅಡಿಗರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ್ನು ಮನೆ-ಮನೆಗೆ ತಲುಪಿಸಿದವರು. ಇವರ ಅವಧಿಯಲ್ಲಿ ಉಡುಪಿಯಲ್ಲಿ ನಡೆದಷ್ಟು ಕನ್ನಡದ ಕಾರ್ಯಕ್ರಮಗಳು ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ನಡೆದಿಲ್ಲ. ಹೀಗಾಗಿ ಕನ್ನಡದ ಒಳಿತಿಗಾಗಿ ಅಡಿಗರು ಇನ್ನೊಮ್ಮೆ ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಚುಕ್ಕಾಣಿ ಹಿಡಿದು ಸೇವೆ ಸಲ್ಲಿಸುವಂತಾಗಲಿ ಎಂದರು.

ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆಗಾಗಿ ಸೈದಾಪುರ ಬಂದ್‌

Advertisement

ಹಿರಿಯ ಸಾಹಿತಿ ಸಾಂಸ್ಕೃತಿಕ ಚಿಂತಕ ಪ್ರೊ| ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅಧ್ಯಕ್ಷತೆ ವಹಿಸಿ ಅಡಿಗರು ಕನ್ನಡದ ಒಳಿತಿಗಾಗಿ ಸದಾ ಹಪಹಪಿಸುವ ವಿಶಿಷ್ಟ ವ್ಯಕ್ತಿತ್ವದವರು ಎಂದರು. ಈ ಸಂದರ್ಭ ಹಿರಿಯರಾದ ಎಚ್‌. ಶ್ರೀಧರ್‌ ಹಂದೆ, ಸುರೇಂದ್ರ ಅಡಿಗರ ಶಿಕ್ಷಕರಾದ ನೀಲಾವರ ಸೀತಾರಾಮ್‌ ಭಟ್‌ ಅವರನ್ನು ಸಮ್ಮಾನಿಸಲಾಯಿತು , ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್‌ ಕೋಟ, ಪಿ.ವಿ.ಆನಂದ ಅವರನ್ನು ಗೌರವಿಸಲಾಯಿತು. ಗಾನಗುಂಜನ, ಕವಿಗೋಷ್ಠಿ ನಡೆಯಿತು.

ಅಭಿನಂದನ ಸಮಿತಿ ಸಂಚಾಲಕ ನರೇಂದ್ರ ಕುಮಾರ್‌ ಕೋಟ ಸ್ವಾಗತಿಸಿ, ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಲಕ್ಷ್ಮೀ ಸೋಮಯಾಜಿ ನಿರೂಪಿಸಿ, ಸುಜಯೀಂದ್ರ ಹಂದೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next