Advertisement

ನೀಲಾವರ: ಮನೆಗೊಂದು ಗಿಡ ಅಭಿಯಾನ

11:06 PM Jun 17, 2020 | Sriram |

ಬ್ರಹ್ಮಾವರ: ನೀಲಾವರ ಚೈತನ್ಯ ಯುವಕ ಮಂಡಲದ 20ನೇ ವರ್ಷಾಚರಣೆ ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉಡುಪಿ ನೆಹರೂ ಯುವಕೇಂದ್ರ, ಉಡುಪಿ ವಲಯ ಅರಣ್ಯ ಇಲಾಖೆಯ ಸಹ ಯೋಗದಲ್ಲಿ ಮನೆಗೊಂದು ಗಿಡ ಅಭಿಯಾನ ಆರಂಭಿಸಲಾಯಿತು.

Advertisement

ಕಾರ್ಯಕ್ರಮಕ್ಕೆ ನೀಲಾವರ ಮಹಿಷ ಮರ್ದಿನೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುರಾಮ ಮಧ್ಯಸ್ಥ ಅವರು ಚಾಲನೆ ನೀಡಿ ಮಾತನಾಡಿ, ಪರಿಸರ ನಾಶ ಮಾಡಿ ಸ್ವಯಂಕೃತ ಅಪರಾಧ ಮಾಡಿದ ಮಾನವ ಇಂದು ಅದರ ಪರಿಣಾಮ ಎದುರಿಸುತ್ತಿದ್ದು, ಇನ್ನಾದರೂ ಎಚ್ಚೆತ್ತು ಪರಿಸರ ರಕ್ಷಿಸಿದಲ್ಲಿ ಮಾತ್ರ ಮಾನವ ಜನಾಂಗ ಉಳಿಯ ಬಲ್ಲುದು. ಈ ನಿಟ್ಟಿನಲ್ಲಿ ಯುವಕ ಸಂಘದ ವತಿಯಿಂದ ನೀಲಾವರ ಗ್ರಾಮದ ಪ್ರತಿ ಮನೆಯಲ್ಲಿ ಗಿಡನೆಟ್ಟು, ಕುಟುಂಬದ ಸದಸ್ಯರೊಂದಿಗೆ ಸೆಲಿf ವಿತ್‌ ಮೈಪ್ಲಾಂಟ್‌ ನಿಜವಾಗಿಯೂ ಅರ್ಥಪೂರ್ಣವಾದುದೆಂದರು.

ಉತ್ತಮ ಅಭಿಯಾನ
ಅತಿಥಿಯಾಗಿ ಉಡುಪಿ ನೆಹರೂ ಯುವಕೇಂದ್ರದ ಸಮನ್ವಯಾಧಿಕಾರಿ ವಿಲ್‌ಫ್ರೆಡ್‌ ಡಿಸೋಜಾ ಅವರು ಮಾತನಾಡಿ, ಅಭಿಯಾನ ಉತ್ತಮ ಉದ್ದೇಶ ಹೊಂದಿದ್ದು, ನೀಲಾವರ ಗ್ರಾಮದಲ್ಲಿ ಒಂದು ಸಾವಿರಕ್ಕೂ ಅಧಿಕ ಮನೆಗಳಲ್ಲಿ ಮನೆಗೊಂದರಂತೆ ಗಿಡ ನೆಟ್ಟಲ್ಲಿ ಒಟ್ಟು ಮರಗಳ ಸಂಖ್ಯೆ ಒಂದು ಕಾಡನ್ನು ಮೀರಿಸಬಲ್ಲುದು ಮತ್ತು ಅಭಿಯಾನ ಇತರ ಯುವಕ/ಯುವತಿ ಸಂಘಗಳಿಗೂ ಪ್ರೇರಣೆಯಾಗಲೆಂದು ಶುಭ ಹಾರೈಸಿದರು. ಅಭಿಯಾನಕ್ಕೆ ಉಡುಪಿ ವಲಯ ಅರಣ್ಯ ಇಲಾಖೆಯು ಅಗತ್ಯ ಗಿಡಗಳನ್ನು ಪೂರೈಸಲಿದೆ ಎಂದು ಅಧಿಕಾರಿ ಜೀವನ್‌ ಶೆಟ್ಟಿ ಹೇಳಿದರು.

ಗೌರವಾಧ್ಯಕ್ಷ ಮಂಜುನಾಥ ಶೆಟ್ಟಿಗಾರ್‌, ಅಧ್ಯಕ್ಷ ಶ್ಯಾಮರಾಯ ಆಚಾರ್ಯ, ಕಾರ್ಯದರ್ಶಿ ಹರೀಶ್‌ ಆಚಾರ್ಯ, ನೀಲಾವರ ಗ್ರಾ.ಪಂ. ಮಾಜಿ ಸದಸ್ಯರಾದ ಬಾವಿ¤ಸ್‌ ಡಿ’ಸೋಜಾ, ರವೀಂದ್ರ ಕೇಳ್ಕರ್‌ ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ಕಾರ್ತಿಕ್‌ ಅಡಿಗ ಅಭಿಯಾನದ ವಿಚಾರವನ್ನು ಪ್ರಸ್ತಾಪಿಸಿ, ನೀಲಾವರ ಯುವಕ ಸಂಘದ ಬೆಳ್ಳಿ ಹಬ್ಬ 2025ರಲ್ಲಿ ನಡೆಯಲಿದ್ದು, ನೆಟ್ಟ ಗಿಡಗಳಲ್ಲಿ ಅತ್ಯುತ್ತಮ ಆರೈಕೆಗಾಗಿ ಚೈತನ್ಯ ರಜತ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದರು.

Advertisement

ಉಪನ್ಯಾಸಕ ಪ್ರಶಾಂತ್‌ ನೀಲಾವರ ಪ್ರಾಸ್ತಾವಿಸಿ, ಸ್ವಾಗತಿಸಿದರು. ಖಜಾಂಚಿ ಮಧುಸೂದನ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next