ಗಂಗಾವತಿ: ನಗರದ ಶ್ರೀ ನೀಲಕಂಠೇಶ್ವರ ದೇವಾಲಯ ನಿರ್ಮಾಣವಾಗಿ 50 ವರ್ಷ ಕಳೆದಿದ್ದು, ಇದರ ನಿಮಿತ್ತ ಮೇ 5ರಿಂದ ಮೂರು ದಿನಗಳ ಕಾಲ ಶ್ರೀ ನೀಲಕಂಠೇಶ್ವರ ದೇವಾಲಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಕುರುಹಿನಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುಖಂಡ ಎಂ. ಮಲ್ಲಿಕಾರ್ಜುನ ನಾಗಪ್ಪ ಹೇಳಿದರು.
ನೀಲಕಂಠೇಶ್ವರ ದೇವಾಲಯ ನಿರ್ಮಾಣಕ್ಕಾಗಿ ಉದ್ಯಮಿ ದಿವಂಗತ ಬಸವರಾಜಪ್ಪ ಹಾಗೂ ಮಾಜಿ ಸಂಸದ ಎಚ್.ಜಿ.ರಾಮುಲು ಅವರು ಭೂಮಿ ದಾನ ಮಾಡಿದ್ದಾರೆ. ಅಂದಿನಿಂದ ಕುರುಹಿನಶೆಟ್ಟಿ ಸಮಾಜಕ್ಕೆ ಆಶ್ರಯವಾಗಿದ್ದು ದೇವಾಲಯ, ಶಿಕ್ಷಣ ಸಂಸ್ಥೆ ಹಾಗೂ ಸಹಕಾರಿ ಸಂಸ್ಥೆಗಳ ಕಾರ್ಯಗಳು ನಡೆಯುತ್ತಿವೆ ಎಂದರು.
ಇದೀಗ 50 ವಸಂತಗಳು ಪೂರ್ಣಗೊಂಡಿದ್ದರ ನಿಮಿತ್ತ ಮೇ05 ರಿಂದ 07ರವರೆಗೆ ಮೂರು ದಿನಗಳ ಕಾಲ ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ಜರುಗಲಿದ್ದು, ನೂತನವಾಗಿ ಕುರುಹೀನಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ ಹವಾ ನಿಯಂತ್ರಿತ ಕಲ್ಯಾಣ ಮಂಟಪ ಲೋಕಾರ್ಪಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ 1008 ಕುಂಭ ಮೆರವಣಿಗೆ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖ ಮಠಾಧೀಶರು ಕುರುಹೀನಶೆಟ್ಟಿ ಸಮಾಜದ ಉನ್ನತ ಅಧಿಕಾರಿಗಳು ಹಾಗೂ ಪೂಜ್ಯರನ್ನು ಆಹ್ವಾನಿಸಲಾಗುತ್ತಿದೆ. ಸರ್ವರೂ ಆಗಮಿಸುವಂತೆ ಅವರು ಕೋರಿದರು.
ಕುರುಗೋಡು ಬಸಣ್ಣ, ಶ್ಯಾವಿ ತಿಪ್ಪಣ್ಣ, ಏಳುಬಾವಿ ಕುಬೇರಪ್ಪ, ವಾಸುದೇವ ಮಾಚಾಲಿ, ರವೀಂದ್ರನಾಥ, ಶಿರವಾರ ಲಕ್ಷ್ಮಣ, ಐಲಿ ಬಸವರಾಜ, ಚೇಗೂರಿ ಶ್ಯಾಮಣ್ಣ,ತಟ್ಟಿ ನಾಗಪ್ಪ, ಶಿರಿಗೇರಿ ಸಂಕ್ರಪ್ಪ, ತಟ್ಟಿ ಶ್ರೀನಿವಾಸ, ಹಲ್ಟಿ ನಾಗರಾಜ ಸೇರಿ ಅನೇಕರಿದ್ದರು.
Advertisement
ಇಲ್ಲಿಯ ನೀಲಕಂಠೇಶ್ವರ ದೇವಾಲಯದಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
Related Articles
Advertisement