Advertisement

ಮೂರೂವರೆ ತಿಂಗಳ ಹಿಂದೆ ಹತ್ಯೆಮಾಡಿ ಹೂತಿದ್ದ ಅರ್ಚಕ ನೀಲಕಂಠ ದೀಕ್ಷಿತ್‌ ಮೃತದೇಹ ಹೊರಕ್ಕೆ

10:48 PM Dec 24, 2020 | sudhir |

ಬೆಂಗಳೂರು: ಹಣಕಾಸಿನ ವಿಚಾರವಾಗಿ ಮೂರೂವರೆ ತಿಂಗಳ ಹಿಂದೆ ಹತ್ಯೆಯಾಗಿದ್ದ ಕಾಡುಗೋಡಿಯ ಕಾಶಿ ವಿಶ್ವನಾಥ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ನೀಲಕಂಠ ದೀಕ್ಷಿತ್‌ ಅವರ ಮೃತದೇಹವನ್ನು ಗುರುವಾರ ಹೊರ ತೆಗೆದು ಮಹಜರು ಮಾಡಲಾಗಿದೆ.

Advertisement

ಬೆಂಗಳೂರ ಪೂರ್ವ ವಿಭಾಗದ ತಹಶೀಲ್ದಾರ್‌ ಅಜಿತ್‌, ವೈದ್ಯಾಧಿಕಾರಿ ಜಗದೀಶ್‌ ಮತ್ತು ವೈಟ್‌ಫೀಲ್ಡ್‌ ಉಪ ವಿಭಾಗದ ಎಸಿಪಿ ಹಾಗೂ ಕಾಡುಗೋಡಿ ಠಾಣೆ ಇನ್‌ಸ್ಪೆಕ್ಟರ್‌ ಸಮ್ಮುಖದಲ್ಲಿ ಬಿಬಿಎಂಪಿಯ ಕಸ ವಿಂಗಡಣ ಘಟಕದ ನಿರ್ಮಾಣ ಹಂತದ ಕಟ್ಟಡದ ಪಾಯದಲ್ಲಿದ್ದ ಶವವನ್ನು ಹೊರತೆಗೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಸೆ. 5ರಂದು ರಾತ್ರಿ 8 ಗಂಟೆ ಸುಮಾರಿಗೆ ಮಂಜುನಾಥ್‌ ಎಂಬಾತನು ದೀಕ್ಷಿತ್‌ನನ್ನು ಕೊಂದಿದ್ದ. ಬಳಿಕ ಇತರ ಕೆಲವರ ಸಹಾಯದಿಂದ ಶವವನ್ನು ಸೆ.6ರಂದು ರಾತ್ರಿ ಕಾರಿನಲ್ಲಿ ಕೊಂಡೊಯ್ದು ಹೂತು ಹಾಕಿದ್ದ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಗಾಜನೂರಿನಲ್ಲಿ ಪುನೀತ್‌ರಾಜ್‌ಕುಮಾರ್: ಆಲದ ಮರದ ಕೆಳಗೆ ಕುಳಿತು ತಂದೆಯನ್ನು ಸ್ಮರಿಸಿದ ಅಪ್ಪು

ಇಬ್ಬರ ಬಂಧನ
ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಂಜುನಾಥ್‌ನ ಇಬ್ಬರು ಸಹಚರರಾದ ಭರತ್‌ ಅಲಿಯಾಸ್‌ ಪಡಿ ಮತ್ತು ಹರೀಶ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next