Advertisement

ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾದ ಬಿಜೆಪಿಯ ಪಂಕಜಾ ಮುಂಡೆ ಫೇಸ್ ಬುಕ್, ಟ್ವೀಟರ್ ಪೋಸ್ಟ್

09:54 AM Dec 03, 2019 | Nagendra Trasi |

ಮುಂಬೈ: ಬಿಜೆಪಿಯ ಜನಪ್ರಿಯ ನಾಯಕಿ ಪಂಕಜಾ ಮುಂಡೆ ಸೋಮವಾರ ತಮ್ಮ ಟ್ವೀಟರ್ ಖಾತೆಯನ್ನು ಅಪ್ಡೇಟ್ ಮಾಡಿದ್ದು, ಅದರಲ್ಲಿ ಪಕ್ಷದ ಹೆಸರನ್ನು ತೆಗೆದು ಹಾಕಿದ ನಂತರ ಇದೀಗ ರಾಜಕೀಯ ವಲಯದಲ್ಲಿ ಹಲವಾರು ಪ್ರಶ್ನೆಗಳು ಹರಿದಾಡತೊಡಗಿದೆ.

Advertisement

ರೀ ಟ್ವೀಟ್ (RT’s) ನಮಗೆ ಬೆಂಬಲ ಅಲ್ಲ ಎಂದು ಪಂಕಜಾ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲು ಸಮಯದ ಅಗತ್ಯವಿದೆ. ಈ ಬಗ್ಗೆ ವಿಮರ್ಶೆ ಮಾಡಿಕೊಳ್ಳಲು 8ರಿಂದ 10 ದಿನಗಳ ಕಾಲಾವಕಾಶ ಬೇಕಾಗಿದೆ ಎಂದು ಪಂಕಜಾ ಮುಂಡೆ ಉಲ್ಲೇಖಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ದಿ.ಗೋಪಿನಾಥ್ ಮುಂಡೆ ಅವರ 60ನೇ ಜನ್ಮ ಜಯಂತಿ ವೇಳೆ ಡಿಸೆಂಬರ್ 12ರಂದು ಉತ್ತರದ ಜತೆಗೆ ನಿಮ್ಮ ಮುಂದೆ ವಾಪಸ್ ಬರಲಿದ್ದೇನೆ ಎಂದು ಉಲ್ಲೇಖಿಸುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.

ಕಳೆದ ವಾರ ಬಿಜೆಪಿಯ ನೂತನ ಸರ್ಕಾರ ಅಧಿಕಾರ ವಹಿಸಿಕೊಳ್ಳಬೇಕು ಎಂದು ಚರ್ಚೆ ನಡೆಸಿದ್ದ ಬಿಜೆಪಿಯ ಕೋರ್ ಕಮಿಟಿಯಲ್ಲಿಯೂ ಪಂಕಜಾ ಮುಂಡೆ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಂದೇನು ಮಾಡಬೇಕು? ನಾವು ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು? ನಾನು ಜನರಿಗೆ ಏನನ್ನು ಕೊಡಲು ಸಾಧ್ಯ? ನಮ್ಮ ಬಲವೇನು? ಜನರ ನಿರೀಕ್ಷೆಗಳೇನು ಎಂಬುದನ್ನು ತಿಳಿದುಕೊಂಡು ಮುಂದಿನ ದಾರಿ ನಿರ್ಧರಿಸಬೇಕಾಗಿದೆ ಎಂದು ಪಂಕಜಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next