Advertisement

ಹೊಸ ಆವಿಷ್ಕಾರಕ್ಕೆ ಮುಂದಾಗಬೇಕು

12:28 PM Feb 19, 2018 | |

ಬೆಂಗಳೂರು: ನಮ್ಮಲ್ಲಿರುವ ಕೌಶಲ್ಯವನ್ನು ಸರಿಯಾಗಿ ಬಳಸಿಕೊಂಡರೆ ಜಗತ್ತಿಗೆ ಮೌಲ್ಯವರ್ಧಿತ ತೆರಿಗೆ ಸೇವೆಗಳನ್ನು ಕೊಡಬಹುದಾದ ಸಾಧ್ಯತೆಗಳಿವೆ. ಯುವ ಜನಾಂಗ ಹೊಸ ಅವಕಾಶಗಳನ್ನು ಹುಡುಕಿ ಮುನ್ನುಗ್ಗಬೇಕು ಎಂದು ಸಿಎ ಸಂಸ್ಥೆಯ ಕೇಂದ್ರೀಯ ಐಡಿಟಿ ಸಮಿತಿ ಅಧ್ಯಕ್ಷ ಲೆಕ್ಕಪರಿಶೋಧಕ ಮಧುಕರ್‌ ಹಿರೆಗಂಗೆ ಅಭಿಪ್ರಾಯ ಪಟ್ಟರು.

Advertisement

ಮÇÉೇಶ್ವರದ ಅಖೀಲ ಹವ್ಯಕ ಮಹಾಸಭೆಯಲ್ಲಿ ನಡೆದ 5ನೇ ವರ್ಷದ ಕೇಂದ್ರ ಮುಂಗಡ ಪತ್ರ -ಸಕಾಲಿಕ ಮಾಹಿತಿ ಮತ್ತು ತೆರಿಗೆ ಸಲಹೆಗಳು ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಎಸ್‌ಟಿ ವ್ಯವಸ್ಥೆಯಿಂದ ಸರ್ಕಾರದ ತೆರಿಗೆ ಆದಾಯ ಹೆಚ್ಚಿದೆ. ತೆರಿಗೆ ರಹಿತವಾಗಿ ವ್ಯವಹಾರ ಮಾಡುತ್ತಿದ್ದ ಶೇ.45ರಷ್ಟು ಜನರು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಜೋಡಣೆಯಾಗಿದ್ದಾರೆ ಎಂದರು.

ದೇಶದಲ್ಲಿ ನಡೆಯುವ ವಾಣಿಜ್ಯ ವ್ಯವಹಾರದ ಕೆಲವು ಭಾಗವಷ್ಟೇ ತೆರಿಗೆ ವ್ಯವಸ್ಥೆಯಡಿ ದಾಖಲಾಗುತ್ತಿದೆ. ಬಹುತೇಕ ವ್ಯವಹಾರಗಳು ತೆರಿಗೆ ಕಟ್ಟದೆ ನಗದು ರೂಪದಲ್ಲಿ ನಡೆಯುತ್ತಿದೆ. ಜಿಎಸ್‌ಟಿಯಿಂದಾಗಿ ನಗದು ವ್ಯವಹಾರ ಕಡಿಮೆಯಾಗಿದ್ದು, ಅರ್ಥವ್ಯವಸ್ಥೆಗೆ ಲಾಭವಾಗಿದೆ ಎಂದು ಹೇಳಿದರು.

ಕಂಪನಿ ಸೆಕ್ರೇಟರಿಗಳ ಕೇಂದ್ರ ಸಮಿತಿಯ ಸದಸ್ಯ ಎಂ.ಗೋಪಾಲಕೃಷ್ಣ ಹೆಗಡೆ ಮಾತನಾಡಿ, ವಿದ್ಯಾವಂತ ಯುವ ಜನತೆ ಹಳ್ಳಿ  ತೊರೆದು, ನಗರ ಪ್ರದೇಶಗಳತ್ತ ಬರುತ್ತಿ¨ªಾರೆ. ನಾವಿಂದು ನಗರಗಳ ಅಭಿವೃದ್ಧಿಯ ಬಗ್ಗೆ ಮಾತ್ರ ಚಿಂತಿಸುತ್ತಿದ್ದೇವೆ. ಹಳ್ಳಿಗಳ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಯ ಕುರಿತಾಗಿ ಚರ್ಚಿಸಬೇಕಾದ ಅಗತ್ಯತೆಯಿದೆ ಎಂದರು.

ಲೆಕ್ಕಪರಿಶೋಧಕ ಪ್ರಕಾಶ್‌ ಹೆಗಡೆ , ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ್‌ ಕಜೆ, ಉಪಾಧ್ಯಕ್ಷ ಶ್ರೀಧರ್‌ ಭಟ್‌ ಕೆಕ್ಕಾರು, ಪ್ರಧಾನ ಕಾರ್ಯದರ್ಶಿಗಳಾದ ವೇಣು ವಿಘ್ನೇಶ್‌ ಸಂಪ, ಶಿವರಾಮ ಭಟ್‌, ಕಾರ್ಯದರ್ಶಿಗಳಾದ ಪ್ರಶಾಂತ್‌ ಭಟ್‌ ಮಲವಲ್ಲಿ, ಶ್ರೀಧರ್‌ ಭಟ್‌ ಸಾಲೆಕೊಪ್ಪ, ಮಹಾಸಭೆಯ ಲೆಕ್ಕಪರಿಶೋಧಕ ನಾರಾಯಣ್‌ ಭಟ್‌ ಮೊದಲಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next