ಮಣಿಪಾಲ: ಮಾಹೆ ವತಿಯಿಂದ ಮಣಿಪಾಲದ ಆವರಣದಲ್ಲಿ “ಸಾಮಾಜಿಕ ಪರಿವರ್ತನೆಯಲ್ಲಿ ಯುವ ಸಮುದಾಯ’ 4ನೇ ರಾಷ್ಟ್ರೀಯ ಸಮಾವೇಶ ನಡೆಯಿತು.
ಸಮಾವೇಶದಲ್ಲಿ ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು ಅವರು ಮಾತನಾಡಿ, “ತಳಮಟ್ಟದಿಂದಲೇ ಆರ್ಥಿಕ ಕೊಡುಗೆಯನ್ನು ಉತ್ತೇಜಿಸುವುದು ಅತೀ ಅಗತ್ಯವಾಗಿದೆ. ಉದಯೋನ್ಮುಖ ಉದ್ಯಮಶೀಲರು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಅವಕಾಶಗಳನ್ನು ವಿಸ್ತರಿಸುವ ಪ್ರಯತ್ನ ಮಾಡಬೇಕು. ಮಣಿಪಾಲದಲ್ಲಿ ವಿಶ್ವ
ಪ್ರಸಿದ್ಧ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ಡಾ| ಟಿ.ಎಂ.ಎ.ಪೈ ಅವರ ಆದರ್ಶವನ್ನು ಅನುಸರಿಸಬೇಕು’ ಎಂದರು.
ಮಾಹೆ ಟ್ರಸ್ಟ್ ಅಧ್ಯಕ್ಷ ಡಾ| ರಂಜನ್ ಆರ್.ಪೈ ಉದ್ಘಾಟಿಸಿದರು. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಪ್ರವಾಹ್ ಮತ್ತು ಕಮ್ಯುನಿಟ್- ದ ಯೂತ್ ಕಲೆಕ್ಟಿವ್ ಇದರ ಆಶ್ರಫ್ ಪಾಟೀಲ್, ಮಿಟ್ಟಿ ಕೆಫೆಯ ಅಲಿನಾ ಅಲಮ್, ಸಿಆರ್‌ವೈ ಚೈಲ್ಡ್ ರೈಟ್ಸ್‌ನ ಅನುಪಮಾ ಮುಹುರಿ ಸಂವಾದದಲ್ಲಿ ಭಾಗವಹಿಸಿದರು.
ಕುಲಪತಿ ಲೆ|ಜ| ಡಾ| ಎಂ.ಡಿ.ವೆಂಕಟೇಶ್ ಸ್ವಾಗತಿಸಿ ಪ್ರಸ್ತಾವನೆಗೈದರು. ಆಯೋಜನ ಕಾರ್ಯದರ್ಶಿ ಡಾ| ಪ್ರವೀಣ್ ಕುಮಾರ್ ವಂದಿಸಿದರು. ಸಮಾವೇಶದ ಸಂಚಾಲಕ ಡಾ| ಅನೂಪ್ ನಹಾ, ಸಂಯೋಜಕ ಅಭಿಷೇಕ್ ಚತುರ್ವೇದಿ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಪಲ್ಲವಿ ಕಾಮತ್, ನವೀನ್ ಉಪಸ್ಥಿತರಿದ್ದರು.