Advertisement
ಸುಬ್ರಹ್ಮಣ್ಯ: ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪ್ರದೇಶವಾದರೂ ಒಳ ಹೋದಂತೆ ಹಲವು ಸಮಸ್ಯೆಗಳು ಕಾಣ ಸಿಗುತ್ತವೆ. ಪ್ರಮುಖವಾಗಿ ರಸ್ತೆ ಅಭಿ ವೃದ್ಧಿಯಾಗದೇ ಇರುವುದು ಸಂಕಷ್ಟದ ಕೊಂಡಿಯಾಗಿದೆ. ಇದು ನೂಜಿಬಾಳ್ತಿಲ ಗ್ರಾಮದ ಚಿತ್ರಣ.
Related Articles
Advertisement
ಗೋಳಿಯಡ್ಕ-ಬಾಂತಾಜೆ-ಕಾನೋಳಿ ಮಣ್ಣಿನ ರಸ್ತೆಯಾಗಿದ್ದು, ಒಂದು ಕಡೆ ಮಾತ್ರ ಕಾಂಕ್ರೀಟ್ ಕಾಮಗಾರಿ ನಡೆದಿದೆ. ಉಳಿದಂತೆ ಸುಮಾರು 3 ಕಿ.ಮೀ. ರಸ್ತೆ ಅಭಿವೃದ್ಧಿ ಆಗಬೇಕಿದೆ. ಪೇರಡ್ಕ-ಪೆಲತ್ರಾಣೆ ಸಂಪರ್ಕ ರಸ್ತೆ, ಪೇರಡ್ಕ-ಓಟಿಮಾರ್-ಗೌಡಿಗೆ ಸಂಪರ್ಕ ರಸ್ತೆಯೂ ಅಭಿವೃದ್ಧಿ ಹೊಂದಿಲ್ಲ. ನಿತ್ಯ ನೂರಾರು ಜನ ಮಣ್ಣಿನ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ.
ಸಾರ್ವಜನಿಕ ಸಾರಿಗೆ ಸಮಸ್ಯೆ :
ನೂಜಿಬಾಳ್ತಿಲದ ಕೇಂದ್ರ ಕಲ್ಲುಗುಡ್ಡೆಗೆ ಇನ್ನೂ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೂಡಿ ಬಂದಿಲ್ಲ. ಕಡಬದಿಂದ ಕಲ್ಲುಗುಡ್ಡೆಗೆ ದಿನದ ಮೂರು ಹೊತ್ತು ಸರಕಾರಿ ಬಸ್ ಸಂಚರಿಸಬೇಕೆಂಬ ಇಲ್ಲಿನ ಜನತೆಯ ದಶಕಗಳ ಬೇಡಿಕೆ ಇನ್ನೂ ಈಡೇರಿಲ್ಲ. ಕಡಬ ತಾಲೂಕು ಕೇಂದ್ರಕ್ಕೆ ನಿತ್ಯ ನೂರಾರು ಜನರು ತೆರಳುವವರು ಖಾಸಗಿ ವಾಹನಗಳಲ್ಲೇ ಪ್ರಯಾಣಿಸುತ್ತಿದ್ದಾರೆ.
ಅರ್ಧದಲ್ಲೇ ಸಭಾಂಗಣ ಕಾಮಗಾರಿ :
6 ವರ್ಷಗಳ ಹಿಂದೆ ಗ್ರಾಮ ವಿಕಾಸ ಯೋಜನೆಗೆ ಆಯ್ಕೆಯಾದ ನೂಜಿಬಾಳ್ತಿಲ ಗ್ರಾಮಕ್ಕೆ 75 ಲಕ್ಷ ರೂ. ಅನು ದಾನ ಮಂಜೂರಾಗಿ ವಿವಿಧ ಅಭಿವೃದ್ಧಿ ಕೆಲಸ ನಡೆಸ ಲಾಗಿತ್ತು. ಅದರಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಗ್ರಾ.ಪಂ. ಕಚೇರಿ ಮೇಲ್ಛಾವಣಿಯಲ್ಲಿ ಸಭಾಂಗಣ ಕಾಮಗಾರಿ ಆರಂಭಿಸಿ 6 ವರ್ಷಗಳಾಗುತ್ತಾ ಬಂದರೂ ಪೂರ್ಣಗೊಂಡಿಲ್ಲ. ರೆಂಜಿಲಾಡಿ ಗ್ರಾಮದಲ್ಲಿ ರಸ್ತೆ ಜತೆ ನೆಟ್‌ವರ್ಕ್ ಸಮಸ್ಯೆ ಇನ್ನೂ ಜೀವಂತವಾಗಿದೆ.
ಅಂಬೆಡ್ಕರ್ ಭವನದ ಬೇಡಿಕೆ :
ನೂಜಿಬಾಳ್ತಿಲದಲ್ಲಿ ಸಭೆ ಸಮಾರಂಭಗಳು ಶಾಲೆ ಕೊಠಡಿಯಲ್ಲಿ ನಡೆಯಬೇಕಿದೆ. ಕಲ್ಲುಗುಡ್ಡೆಯಲ್ಲಿ ಮೀಸಲಿಡಲಾಗಿದೆ ಎನ್ನಲಾಗಿರುವ ಜಮೀನಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿದ್ದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಕಲ್ಲುಗುಡ್ಡೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಈ ಹಿಂದೆಯೂ ಹಲವು ಬಾರಿ ಆಗ್ರಹಗಳು ಕೇಳಿಬಂದಿದ್ದವು.
ಇತರ ಸಮಸ್ಯೆ :
- ಅಸಮರ್ಪಕ ನೆಟ್‌ವರ್ಕ್
- ರಾಷ್ಟ್ರೀಕೃತ ಬ್ಯಾಂಕ್ ಇದ್ದರೂ ಎಟಿಎಂ ಸೌಲಭ್ಯವಿಲ್ಲ
- ಅಸಮರ್ಪಕ ಚರಂಡಿ
- ರೆಂಜಿಲಾಡಿ ಆರೋಗ್ಯ ಉಪಕೇಂದ್ರಕ್ಕೆ ಜಮೀನು ಇದ್ದರೂ ಕಟ್ಟಡವಿಲ್ಲ
- ಘನತ್ಯಾಜ್ಯ ಘಟಕ ಕೊರತೆ
- ಅಸಮರ್ಪಕ ಸಾರ್ವಜನಿಕ ಶೌಚಾಲಯ
- ರೆಂಜಿಲಾಡಿ ಗ್ರಾಮದ ನೂಜಿಶ್ರೀ ಉಳ್ಳಾಲ್ತಿ ದೈವಸ್ಥಾನದ ಬಳಿ ತೋಡಿಗೆ ಸೇತುವೆ ನಿರ್ಮಾಣವಾಗಬೇಕಿದೆ