Advertisement
ತೊಡಿಕಾನ ದೇಗುಲದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಮತ್ಸ್ಯ ತೀರ್ಥ ಹೊಳೆ ಇದೆ. ಇದರಲ್ಲಿ ಸಾವಿರಾರು ಮಹಷೀರ್ ಜಾತಿಯ ಮೀನುಗಳಿದ್ದು ಇವುಗಳನ್ನು ದೇವರ ಮೀನುಗಳೆಂದು ಕರೆಯಲಾಗುತ್ತದೆ. ಬೇಸಗೆಯಲ್ಲಿ ನೀರಿನ ಕೊರತೆ ಎದುರಾಗುತ್ತದೆ. ಹೀಗಾಗಿ ದೇವ ಸ್ಥಾನದವರು ಮೀನುಗಳಿರುವ ಜಾಗದಿಂದ ಸುಮಾರು ಎರಡೂವರೆ ಕಿ.ಮೀ. ದೂರದ ದೇವರಗುಂಡಿ ಜಲಪಾತ ಸಮೀಪದ ಹೊಳೆಯಿಂದ ಪೈಪ್‌ಗ್ಳ ಮೂಲಕ ಮತ್ಸ್ಯ ತಟಾಕಕ್ಕೆ ನೀರು ಪೂರೈಸುತ್ತಾರೆ. ಇದರಿಂದ ಮೀನುಗಳ ಜೀವಕ್ಕೆ ಉಂಟಾಗುವ ಅಪಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಾದರೂ ಬಿಸಿಲ ತಾಪಕ್ಕೆ ಮೀನುಗಳು ಒಮ್ಮೊಮ್ಮೆ ಅಸುನೀಗುತ್ತವೆ. ಆದ್ದರಿಂದ ಮೀನಿಗಳ ಸಂರಕ್ಷಣೆಗೆ ಶಾಶ್ವತ ಯೋಜನೆ ಅಗತ್ಯವಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.
Related Articles
Advertisement
ಸ್ಥಳೀಯರ ನಂಬಿಕೆ :
ವಿಷ್ಣುವು ಮತ್ಸ್ಯರೂಪ ತಾಳಿ ಮೇಲೆದ್ದ ಸ್ಥಳ ಇದಾಗಿದೆ ಎಂಬ ನಂಬಿಕೆ ಇಲ್ಲಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಮೀನುಗಳನ್ನು ಯಾರೂ ತಿನ್ನುವುದಿಲ್ಲ. ಮತ್ಸ್ಯ ತೀರ್ಥ ಹೊಳೆಯಲ್ಲಿ ಮೀನು ಹಿಡಿಯುವುದನ್ನು ನಿಷೇಧಲಾಗಿದೆ. ಇಲ್ಲಿಯ ದೇವರ ಮೀನುಗಳಿಗೆ ಆಹಾರ ಹಾಕುತ್ತೆವೆ ಎಂದು ಹರಕೆ ಹೇಳಿಕೊಂಡರೆ ಚರ್ಮ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ.
ಮೀನುಗಳಿಗೆ ಪ್ರತಿ ವರ್ಷ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗಿ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಮೀನುಗಾರಿಕೆ ಇಲಾಖೆಯಲ್ಲಿ ಮಹಷೀರ್ ಮೀನುಗಳ ಸಂರಕ್ಷಣೆಗೆ ಇರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಯೋಜನೆ ರೂಪಿಸಲಾಗುವುದು.-ಎಸ್.ಅಂಗಾರ, ಸಚಿವರು, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ
ತೇಜೇಶ್ವರ್ ಕುಂದಲ್ಪಾಡಿ