Advertisement

ಯುವ ರೈತ ಪ್ರಶಸ್ತಿ ನೀಡುವ ಪರಿಪಾಠ ಬೆಳೆಯಲಿ: ಶಾಸಕ ಭಟ್‌

09:49 AM Dec 24, 2019 | Hari Prasad |

ಉಡುಪಿ: ಜಿಲ್ಲೆಯಲ್ಲಿ ತೋಟಗಾರಿಕೆ, ಕೃಷಿ ಲಾಭದಾಯಕ ಉದ್ಯಮವಾಗಬೇಕು. ಯುವ ಸಮುದಾಯವೂ ಸಾಕಷ್ಟು ಸಂಖ್ಯೆಯಲ್ಲಿ ಕೃಷಿ ಚಟುವಟಿಕೆಯತ್ತ ಗಮನಹರಿಸಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಯುವರೈತ ಪ್ರಶಸ್ತಿ ನೀಡುವ ಪರಿಪಾಠ ಬೆಳೆಯಬೇಕು ಎಂದು ಶಾಸಕ ಕೆ.ರಘುಪತಿ ಭಟ್‌ ಹೇಳಿದರು.

Advertisement

ಜಿ.ಪಂ., ಕೃಷಿ ಇಲಾಖೆ, ಆತ್ಮ ಅನುಷ್ಠಾನ ಸಮಿತಿ, ತಾಲೂಕು ಕೃಷಿಕ ಸಮಾಜ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಅಂಬಲಪಾಡಿ ಬೈಪಾಸ್‌ನಲ್ಲಿ ಸೋಮವಾರ ರೈತರ ದಿನಾಚರಣೆ ಅಂಗವಾಗಿ ಸಾಧಕ ರೈತರಿಗೆ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮ್ಮಾನದ ಮೂಲಕ ಕೃಷಿಕರು ಮತ್ತಷ್ಟು ಕೃಷಿ ಮಾಡಲು ಪ್ರೇರಣೆಯಾಗಬೇಕು. ಕಳೆದ 20-25 ವರ್ಷಗಳಿಗೆ ಹೋಲಿಸಿದರೆ ಭತ್ತದ ಕೃಷಿ ಶೇ.30ರಿಂದ 40ರಷ್ಟು ಇಳಿಕೆಯಾಗಿದೆ. ಕೃಷಿಬೂಮಿಗಳು ಲೇಔಟ್‌ಗಳಾಗಿವೆ. ಯುವಸಮುದಾಯ ನಗರ ಪ್ರದೇಶಗಳಿಗೆ ಹೋಗಿ ಅಲ್ಪವೇತನಕ್ಕೆ ದುಡಿಯುವುದಕ್ಕಿಂತ ನಮ್ಮಲ್ಲಿರುವ ಕೃಷಿಯನ್ನೇ ಅಭಿವೃದ್ಧಿಪಡಿಸಿ ಉತ್ತಮ ಆದಾಯ ಗಳಿಸಬಹುದು. ಅದರಲ್ಲೂ ಸಾವಯವ ಕೃಷಿಯ ಮೂಲಕ ಉತ್ತಮ ಆದಾಯ ಗಳಿಸಬಹುದು. ಕೆಮಿಕಲ್‌ ಬಳಸದೆ ಬೆಳೆ ಬೆಳೆಸುವುದನ್ನು ಕರಗತಮಾಡಿಕೊಳ್ಳಬೇಕು. 20-25 ವರ್ಷಗಳ ಹಿಂದೆ ಕೃಷಿಗೆ ಇದ್ದ ಮಹತ್ವ ಈಗಲೂ ಮುಂದುವರಿಯಬೇಕು ಎಂದರು.


ಜಿ.ಪಂ.ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಅವರ ಯಶೋಗಾಥೆ ಇತರರಿಗೆ ಪ್ರೇರಣೆಯಾಗುವಂತೆ ಮಾಡುವುದೆ ಪ್ರಶಸ್ತಿ ನೀಡುವ ಮುಖ್ಯ ಉದ್ದೇಶ. ಹಸಿರು ಕ್ರಾಂತಿಯ ಬಳಿಕ ದೇಶದಲ್ಲಿ ಆಹಾರೋತ್ಪಾದನೆ ಹೆಚ್ಚಾಗಿರುವುದು ನಿಜವಾದರೂ, ರಾಸಾಯನಿಕಯುಕ್ತ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ರೈತರ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗಿವೆ.

ರೈತರು ಸಾವಯವ ಕೃಯತ್ತ ಮನಸ್ಸು ಮಾಡಿರುವುದು ಉತ್ತಮ ವಿಚಾರ. ಗ್ರಾಹಕರಲ್ಲಿಯೂ ಸಾವಯವ ಕೃಷಿ ಉತ್ಪನ್ನಗಳ ಬಗ್ಗೆ ಅರಿವು ಮೂಡಿದ್ದು, ಜನರು ಸಾವಯವ ಪದ್ದತಿಯಲ್ಲಿ ಬೆಳೆದ ಉತ್ಪನ್ನಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಕೃಷಿಯಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸಮ್ಮಾನಿಸಿ ಅವರನ್ನು ಹುರಿದುಂಬಿಸುವುದು ಅರ್ಥಪೂರ್ಣ ಕಾರ್ಯಕ್ರಮ ಎಂದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡ್ಗಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸುಭಾಷಿತ್‌ ಕುಮಾರ್‌, ಶ್ರೀಕ್ಷೇತ್ರ ಧರ್ಮಸ್ಥಳದ ತಾಲೂಕು ಯೋಜನಾಧಿಕಾರಿ ರೋಹಿತ್‌ ಎಚ್‌., ಕಿಸಾನ್‌ ಸಂಘದ ಪ್ರತಿನಿಧಿ ಬಿ.ವಿ.ಪೂಜಾರಿ ಉಪಸ್ಥಿತರಿದ್ದರು. ದ.ಕ., ಉಡುಪಿ, ಚಿಕ್ಕಮಗಳೂರು ಪ್ರಾಂತೀಯ ಸಾವಯವ ಕೃಷಿಕರ ಒಕ್ಕೂಟದ ನಿರ್ದೇಶಕ ದೇವದಾಸ್‌ ಹೆಬ್ಟಾರ್‌, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಪ್ರದೀಪ್‌ ಹೆಬ್ಟಾರ್‌, ಬ್ರಹ್ಮಾವರದ ಕೆ.ವಿ.ಕೆ. ಮುಖ್ಯಸ್ಥ ಡಾ| ಧನಂಜಯ್‌ ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್‌ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

Advertisement

ಪ್ರಶಸ್ತಿ ಪ್ರದಾನ
2018-2019 ಸಾಲಿನ ಕೃ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಕ್ರಮವಾಗಿ ಪ್ರೇಮಾ ಪೂಜಾರ್ತಿ, ಕೆ.ವಸಂತ ಶೆಟ್ಟಿ ಮತ್ತು ಸುಬ್ರಾಯ ನಾಯ್ಕ ಹಾಗೂ ಆತ್ಮ ಯೋಜನೆಯಡಿ ಹಂದಿ ಸಾಕಣಿಕೆಯಲ್ಲಿ ಎಡ್ವರ್ಡ್‌ ಮೆಂಡೋನ್ಸ, ಪಂಜರು ಮೀನು ಕೃಷಿಯಲ್ಲಿ ಸುದೀನ, ಸಮಗ್ರ ಕೃಷಿ ಪದ್ದತಿಯಲ್ಲಿ ಪೀಟರ್‌ ಡಿಸೋಜಾ, ಶಂಕರ್‌ ನಾಯ್ಕ ಮತ್ತು ಜೂಲಿಯನ್‌ ದಾಂತಿ, ಸಾವಯವ ಕೃಷಿಯಲ್ಲಿ ಸಂಪಾವತಿ, ಹೈನುಗಾರಿಕೆಯಲ್ಲಿ ಎಚ್‌. ಪ್ರಕಾಶ ಕೆದ್ಲಾಯ ಅವರಿಗೆ ತಾಲೂಕು ಮಟ್ಟದ ರೈತ ಸಾಧಕ ಪ್ರಶಸ್ತಿ ನೀಡಿ ಗೌರಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next