Advertisement

ಲೈಂಗಿಕವಾಗಿ ಬಳಸಿ ವಂಚಿಸುವ ಪ್ರಕರಣಗಳಿಗೆ ವಿಶೇಷ ಕಾನೂನು ಬೇಕು: ಅಲಹಾಬಾದ್‌ ಹೈಕೋರ್ಟ್‌

07:53 PM Aug 04, 2021 | Team Udayavani |

ಪ್ರಯಾಗ್‌ರಾಜ್‌: ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ನಡೆಸಿ ವಂಚಿಸುವ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಕಾನೂನು ರಚನೆಯಾಗಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ.ಪ್ರದೀಪ್‌ ಕುಮಾರ್‌ ಶ್ರೀವಾಸ್ತವ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕಾನ್ಪುರದ ಹರ್ಷವರ್ಧನ್‌ ಯಾದವ್‌ ಎಂಬಾತ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ನಡೆಸಿ, ವಂಚಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಬಂಧಿಸಲಾಗಿತ್ತು. ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

“ಮಹಿಳೆಯರನ್ನು ಭೋಗದ ವಸ್ತು ಎಂದು ತಿಳಿಯುವುದು ಪುರುಷರ ದುರಭಿಮಾನದ ದ್ಯೋತಕ. ಅವರನ್ನು ಬಳಕೆ ಮಾಡಿ ವಂಚಿಸುವ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ಕಾನೂನು ಅಗತ್ಯವಾಗಿದೆ. ಈ ಮೂಲಕ ಇಂಥ ವರ್ತನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಮಾಜದಲ್ಲಿ ಮಹಿಳೆಯರು ಸುರಕ್ಷಿತವಾಗಿ ಮತ್ತು ನೆಮ್ಮದಿಯಿಂದ ಇರುವ ಭಾವನೆ ನಿರ್ಮಿಸಬಹುದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next