Advertisement

ಮೇಕ್‌ ಇನ್‌ ಇಂಡಿಯಾ ಅಗತ್ಯತೆ…

08:12 PM Aug 14, 2020 | Karthik A |

ಭಾರತದಲ್ಲಿ ಇಂದು ವಿದೇಶಿ ವಸ್ತುಗಳ ಆಮದು ಪ್ರಮಾಣ ಅಧಿಕವಾಗುತ್ತಿದ್ದು ಆರ್ಥಿಕತೆ ನೆಲ ಕಚ್ಚುತ್ತಿದೆ.

Advertisement

ಆದ್ದರಿಂದ ಸರಕಾರಗಳು ಆರ್ಥಿಕತೆಯನ್ನು ಉತ್ತೇಜಿಸಲು ತನ್ನದೇ ಆದಂಥ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಅದರಲ್ಲಿ ಮೇಕ್‌ ಇನ್‌ ಇಂಡಿಯಾ ಕೂಡ ಒಂದು. ವಿದೇಶಿ ವಸ್ತುಗಳನ್ನು ನಿಷೇಧಿಸಿ ನಮ್ಮ ದೇಶದಲ್ಲೇ ವಸ್ತುಗಳನ್ನು ತಯಾರಿಸಿ ವಿಶ್ವ ಮಾರುಕಟ್ಟೆಗೆ ಪರಿಚಯಿಸಬೇಕಾಗಿದೆ.

ಆಗ ಮಾತ್ರ ದೇಶದ ಆರ್ಥಿಕತೆಗೆ ಶಕ್ತಿ ಬರಲು ಸಾಧ್ಯ. ಸ್ವಾವಲಂಬಿಯಾಗಿ ದೇಶ ಬೆಳೆಯಲು ಸಾಧ್ಯ.

ಅದಲ್ಲದೆ ನಮ್ಮಂತಹ ರಾಷ್ಟ್ರ ಬೇರೊಂದು ರಾಷ್ಟ್ರಕ್ಕೆ ಕಚ್ಚಾ ವಸ್ತುಗಳನ್ನು ರಫ್ತು ಮಾಡಿ ಸಿದ್ಧವಸ್ತುಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ಕಡಿವಾಣ ಹಾಕಬಹುದಾಗಿದೆ. ದೇಶದಲ್ಲೇ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಿಕೊಂಡು ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುವುದರಿಂದ ಭಾರತದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

Advertisement

ಇತ್ತೀಚೆಗೆ ಭಾರತದಲ್ಲಿ ಕಡಿಮೆಯಾಗುತ್ತಿರುವ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮೇಕ್‌ ಇನ್‌ ಇಂಡಿಯಾ ಸಹಕಾರಿಯಾಗಿದೆ. ಇದರಿಂದ ಭಾರತದಲ್ಲಿರುವ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಅವರು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವುದನ್ನು ತಡೆಯಬಹುದಾಗಿದೆ.
ಚೀನದ ವಸ್ತುಗಳನ್ನು ಭಾರತ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದ್ದು, ಇದು ಬೇರೊಂದು ದೇಶದ ಅವಲಂಬನೆ ತಡೆಯಲು ಪೂರಕವಾಗಿದೆ. ಜತೆಗೆ ರಾಷ್ಟ್ರದ ಯಾವುದೇ ಮಾಹಿತಿಗಳು ಸೋರಿಕೆಯಾಗದಂತೆ ತಡೆಯಲೂ ಸಹಕಾರಿಯಾಗಿದೆ.

ವಿದೇಶಕ್ಕೆ ಹೋಗೋ ಬದಲು ಭಾರತದಲ್ಲಿ ಇದ್ದು ಇಂತಹ ಹೊಸ ಹೊಸ ಅನ್ವೇಷಣೆಗಳನ್ನು ಮಾಡಿದಲ್ಲಿ ಮೇಕ್‌ ಇನ್‌ ಇಂಡಿಯಾ ಸುಲಭವಾಗುವುದಲ್ಲದೆ, ನಮ್ಮ ದೇಶ ಸ್ವಾವಲಂಬನೆಯತ್ತ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ಅಲ್ಲದೆ ದೇಶದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗುತ್ತದೆ. ರಾಷ್ಟ್ರದ ಪ್ರಗತಿ ನಮ್ಮಿಂದಲೇ ಆಗಬೇಕು. ಆಗ ಮಾತ್ರ ನಮ್ಮ ದೇಶವನ್ನು ಸಬಲವಾಗಿ ಮನ್ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ತುಂಬಾ ಬದಲಾವಣೆ ಯಾಗುತ್ತಿದ್ದು, ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಶಿವಮೊಗ್ಗ ತಾಲೂಕಿನ ಮಂಡಗದ್ದೆ ಊರಿನ ನಿವೇದನ್‌ ಎಂಬ ವ್ಯಕ್ತಿ. ಇವರು ಆಸ್ಟ್ರೇಲಿಯಾದಿಂದ ಬಂದು ತನ್ನ ರಾಷ್ಟ್ರಕ್ಕಾಗಿ ಏನಾದರೂ ಕೊಡುಗೆ ಸಲ್ಲಿಸಬೇಕೆಂಬ ಚಿಂತನೆಯಲ್ಲಿದ್ದಾಗ ಅಡಕೆಯಿಂದಾಗಿ ಕ್ಯಾನ್ಸರ್‌ ರೋಗ ಬರುತ್ತದೆ ಎನ್ನುವ ಸುದ್ದಿ ಹಬ್ಬಿತ್ತು. ಆ ಸಂದರ್ಭದಲ್ಲಿ ಇವರು ಅಡಕೆಯಿಂದಲೇ ಅರೆಕಾ ಟೀ ತಯಾರಿಸಿ ಯಾವುದೇ ರೀತಿಯಾದ ಕ್ಯಾನ್ಸರ್‌ ರೋಗ ಅಡಿಕೆಯಿಂದ ಬರುವುದಿಲ್ಲವೆಂದು ಸಾಬೀತುಪಡಿಸಿದರು. ಜತೆಗೆ ಅರೇಕ ಟೀಯನ್ನು ವಿಶ್ವಾದ್ಯಂತ ಪರಿಚಯಿಸಿದರು. ಈ ಮೂಲಕ ಮೇಕ್‌ ಇನ್‌ ಇಂಡಿಯಾ ಎಂಬ ವಿಚಾರಕ್ಕೆ ನಿವೇದನ್‌ ನೆಂಪೆ ಅವರು ಸ್ಫೂರ್ತಿಯಾಗಿದ್ದಾರೆ.

 ಶಬರೀಶ್‌ ಎಂ.ಪಿ.ಎಂ. ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next